ನಾಪೋಕ್ಲು ಮೇ 9 : ಪಾರಾಣೆ ಪ್ರೌಢಶಾಲೆಯು ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಿದ್ದು, ಸತತ ನಾಲ್ಕು ಬಾರಿ ಶೇ.100 ಫಲಿತಾಂಶ ಗಳಿಸಿದ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯು ಶೇ. 95.31 ಫಲಿತಾಂಶ ದಾಖಲಿಸಿದರೆ ಸೇಕ್ರೆಡ್ ಹಾರ್ಟ್ ಶಾಲೆಯು 93.33 ಫಲಿತಾಂಶ ದಾಖಲಿಸಿದೆ. ಶ್ರೀರಾಮ ಟ್ರಸ್ಟ್ ಶಾಲೆಯ ವಿದ್ಯಾರ್ಥಿ ಎಮ್.ಸಿ ಸಮಯ ಉತ್ತಪ್ಪ 613 ಅಂಕಗಳಿಸಿ 98 ಶೇ ಫಲಿತಾಂಶ ಪಡೆದುಕೊಂಡಿದ್ದಾರೆ.
ಅದೇ ಶಾಲೆಯ ವಿದ್ಯಾರ್ಥಿಗಳಾದ ಆರ್ಯನ್ ಅಯ್ಯಪ್ಪ 604 ಅಂಕ ಗಳಿಸಿ ಶೇ. 96 ಅಂಕ ಹಾಗೂ ಎನ್.ಪಿ.ಪ್ರಿಶಾ ಮಾಚಮ್ಮ 601 ಅಂಕಗಳಿಸಿ 96.16 ಫಲಿತಾಂಶ ಪಡೆದುಕೊಂಡಿದ್ದಾರೆ.
ಉಳಿದಂತೆ ಕಕ್ಕಬ್ಬೆಯ ಅನುದಾನಿತ ಪ್ರೌಢಶಾಲೆ 93.33, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ ಶೇ.85, ನಾಪೋಕ್ಲುವಿನ ಕೆಪಿಎಸ್ ಪ್ರೌಢಶಾಲೆ ಶೇ.80.39, ಹೊದವಾಡ ಸರ್ಕಾರಿ ಪ್ರೌಢಶಾಲೆ ಶೇ.88.8 ಫಲಿತಾಂಶ ಪಡೆದುಕೊಂಡಿದೆ.
ವರದಿ : ದುಗ್ಗಳ ಸದಾನಂದ.