ವಿರಾಜಪೇಟೆ ಮೇ 9 : ಕಳೆದ ಹದಿನೈದು ದಿನಗಳಿಂದ ಬಿ.ಜೆ.ಪಿ. ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಹಿಂದು ಸಂಘಟನೆಯ ಕಾರ್ಯಕರ್ತರು ಇಂದು ಮಡಿಕೇರಿ ತಾಲ್ಲೂಕಿನ ಕರಡದ ಮಲೆತಿರಿಕೆ ದೇವಾಲಯದಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಆವರವಣವನ್ನು ಸ್ವಚ್ಚಗೊಳಿಸಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅವರು ಈ ಬಾರಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಬೇಕೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ವಿರಾಜಪೇಟೆ ಭಾಗದ ಹಿಂದು ಸಂಘಟನೆಯ ಮಾಳೇಟಿರ ಸನ್ನಿ, ತರ್ಮೆ ಮೊಟ್ಟೆ ಪೊನ್ನಪ್ಪ, ಮಂಜೇಶ, ಕಿಶೋರ್ ಪೂಜಾರಿ, ಗಗನ್, ಬಿದ್ದಪ್ಪ, ಕೆ.ಎಂ.ಅಯ್ಯಪ್ಪ(ಮಣಿ) ಇನ್ನಿತ್ತರ ಕಾರ್ಯಕರ್ತರು ಹಾಜರಿದ್ದರು.