Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೋಟರಿ ವುಡ್ಸ್ ನಿಂದ ಚಾಮಾ೯ಡಿ ಬೈಕ್ ರೈಡ್*
  • *ಕೊಡಗು : 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು*
  • *ಶ್ರೀ ಭಗೀರಥ ಜಯಂತಿ : ಭಗೀರಥ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ : ಚಿ.ನಾ.ಸೋಮೇಶ್*
  • *ಒಳ್ಳೆಯ ಸಂಸ್ಕಾರಕ್ಕೆ ಓದುವ ಅಭ್ಯಾಸ ಅಗತ್ಯ : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
  • *ಮತಾಂತರ ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.24 ರಂದು ನಡೆಯುವ ಪಂದ್ಯಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.23 ರಂದು ಗೆಲುವು ಸಾಧಿಸಿದ ತಂಡಗಳು*
  • *10ನೇ ತರಗತಿ ಫಲಿತಾಂಶ : ಕೊಡಗು ಜಿಲ್ಲೆಗೆ 8ನೇ ಸ್ಥಾನ : 5,948 ವಿದ್ಯಾರ್ಥಿಗಳಲ್ಲಿ 5,742 ವಿದ್ಯಾರ್ಥಿಗಳು ಉತ್ತೀರ್ಣ*
  • *SSKC ಪಿಯು ಕಾಲೇಜು, ಕೆ.ಆರ್ ಪೇಟೆ ವತಿಯಿಂದ AI ಆಧಾರಿತ ಹಾಜರಾತಿ ವ್ಯವಸ್ಥೆ ಅನುಷ್ಠಾನ : ಈ ಪ್ರದೇಶದಲ್ಲೇ ಮೊದಲ ಪ್ರಯತ್ನ*
  • *ವಿಶ್ವ ಪುಸ್ತಕ ದಿನ : ಹೊತ್ತಿಗೆಯ ಜ್ಞಾನ ಬೇಕು ಹೊತ್ತು ಹೊತ್ತಿಗೆ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿಧಾನಸಭಾ ಚುನಾವಣೆ : ಕೊಡಗಿನಲ್ಲಿ ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿಧಾನಸಭಾ ಚುನಾವಣೆ : ಕೊಡಗಿನಲ್ಲಿ ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯ*

ಮೇ 9, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 9 : ವಿಧಾನಸಭಾ ಚುನಾವಣೆ ಸಂಬಂಧ ಮಸ್ಟರಿಂಗ್ ಕಾರ್ಯವು ನಗರದ ಸಂತ ಜೋಸೆಫರ ಶಾಲೆ ಮತ್ತು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆಯಿತು.
ವಿಧಾನಸಭಾ ಚುನಾವಣೆ ಸಂಬಂಧ ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ಎಲ್ಲಾ ಹಂತದ ಪೊಲಿಂಗ್ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ತಮಗೆ ಹಂಚಿಕೆಯಾದ ಮತಗಟ್ಟೆಯ ಸಂಖ್ಯೆಯನ್ನು ತಿಳಿದುಕೊಂಡು ನಿಗಧಿಪಡಿಸಿದ ಕೌಂಟರ್‍ಗೆ ತೆರಳಿ ತಮ್ಮ ಮತಗಟ್ಟೆಗೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡರು. ಬಳಿಕ ಸೆಕ್ಟರ್ ಅಧಿಕಾರಿಗಳಿಂದ ಚುನಾವಣೆ ಸಂಬಂಧ ಮಾಹಿತಿ ಪಡೆದು ಮತಗಟ್ಟೆ ಕಾರ್ಯನಿರ್ವಹಣೆಗೆ ಬೇಕಾಗಿರುವ ಸಾಮಗ್ರಿಗಳನ್ನು ಪಡೆದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕಾರ್ಯವಿಧಾನದ ಬಗ್ಗೆ ಹಲವು ಮಾರ್ಗದರ್ಶನ ಮಾಡಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬನಾ ಎಂ.ಶೇಖ್, ತಹಶೀಲ್ದಾರರಾದ ಪ್ರಶಾಂತ್, ರಾಮಚಂದ್ರ, ಇತರರು ಇದ್ದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರರಾದ ಕಿರಣ್ ಗೌರಯ್ಯ, ಎಸ್.ಎನ್.ನರಗುಂದ, ಚುನಾವಣಾ ತಹಶೀಲ್ದಾರ್ ರವಿಶಂಕರ್ ಹಾಗೂ ಸೆಕ್ಟರ್ ಅಧಿಕಾರಿಗಳು ಮಸ್ಟರಿಂಗ್ ಕಾರ್ಯನಿರ್ವಹಣೆ ಸಂಬಂಧ ಮೇಲ್ವಿಚಾರಣೆ ನಡೆಸಿ ಮತಗಟ್ಟೆ ಅಧಿಕಾರಿಗಳಿಗೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಬಳಿಕ ತಮ್ಮ ತಮ್ಮ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ತೆರಳಿದರು. ಮತಗಟ್ಟೆ ಅಧ್ಯಕ್ಷಾಧಿಕಾರಿ(ಪಿಆರ್‍ಒ), ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ(ಎಪಿಆರ್‍ಒ(1 ನೇ ಪೊಲಿಂಗ್ ಅಧಿಕಾರಿ), 2 ನೇ ಮತಗಟ್ಟೆ ಅಧಿಕಾರಿ(2ನೇ ಪೊಲಿಂಗ್ ಅಧಿಕಾರಿ), 3 ನೇ ಮತಗಟ್ಟೆ ಅಧಿಕಾರಿ(3 ನೇ ಪೊಲಿಂಗ್ ಅಧಿಕಾರಿ) ಅವರು ಮತಗಟ್ಟೆ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.
ಮತಗಟ್ಟೆ ಅಧಿಕಾರಿಗಳು ಪರಸ್ಪರ ಚರ್ಚಿಸಿದರು. ಸುಸೂತ್ರವಾಗಿ ಚುನಾವಣೆ ನಡೆಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಅವರು ನಿರ್ದೇಶನ ನೀಡಿದರು. ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಸಂಬಂಧ ಹಲವು ಮಾಹಿತಿ ಮಾರ್ಗದರ್ಶನ ನೀಡಿದರು.
ಚೆಕ್‍ಲಿಸ್ಟ್: ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್, ರಿಜಿಸ್ಟ್ರರ್ ಆಫ್ ವೋಟರ್ಸ್, ವೋಟರ್ ಸ್ಲಿಪ್, ಗುರುತು ಮಾಡಿರುವ ಮತದಾರರ ಪಟ್ಟಿ ಇತರ ಪ್ರತಿಗಳು, ಅಡ್ರಸ್ ಟ್ಯಾಗ್, ಟೆಂಡರ್ ಬ್ಯಾಲೆಟ್ ಪೇಪರ್, ಮತದಾರರ ಅಂಕಿ ಅಂಶಗಳು, ಅಭ್ಯರ್ಥಿಯ/ ಚುನಾವಣಾ ಏಜೆಂಟ್ ಅಭ್ಯರ್ಥಿಯ/ ಮಾದರಿ ಸಹಿಯ ಪ್ರತಿ, ಇಂಕ್, ಗ್ರೀನ್ ಪೇಪರ್ ಸೀಲು, ಮಾಕ್‍ಪೋಲ್ ಸೀಲು, ಹೀಗೆ ಚೆಕ್‍ಲಿಸ್ಟ್‍ನಂತೆ ನಮೂನೆ ಹಾಗೂ ಸಾಮಗ್ರಿಗಳನ್ನು ಪಡೆದರು.
ಲೇಖನ ಸಾಮಗ್ರಿಗಳಾದ ಪೆನ್ಸಿಲ್, ಪೆನ್ನು, ಬಿಳಿ ಹಾಳೆ, ಗುಂಡು ಪಿನ್ನು, ಸೀಲಿಂಗ್ ವ್ಯಾಕ್ಸ್, ಮತ ಹಾಕುವ ಅಂಕಣ, ದಾರ, ಸೂಜಿ, ಮೊಳೆ, ಮೇಣದ ಬತ್ತಿ, ರಬ್ಬರ್ ಬ್ಯಾಂಡ್, ಡ್ರಾಯಿಂಗ್ ಪಿನ್ಸ್, ಪಾಲಿಥಿನ್ ಬ್ಯಾಗ್, ಕವರ್‌ಗಳು ಹೀಗೆ ವಿವಿಧ ರೀತಿಯ ಸಾಮಗ್ರಿಗಳನ್ನು ಪಡೆದರು.
ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು ವಿವಿ ಪ್ಯಾಟ್‍ಗಳ ಸಂಬಂಧ ಪರಿಶೀಲಿಸಿ ಖಾತರಿಪಡಿಸಿಕೊಂಡರು. ಹೀಗೆ ಮಸ್ಟರಿಂಗ್ ಕಾರ್ಯ ಸಂಬಂಧಿಸಿದಂತೆ ಮಾಹಿತಿ ಪಡೆದು ತಮ್ಮ ಮತಗಟ್ಟೆಗಳಿಗೆ ತೆರಳಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 90 ಮಾರ್ಗಗಗಳಲ್ಲಿ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, 38 ಬಸ್( ಕೆಎಸ್‌ಆರ್‌ಟಿಸಿ), 11 ಮಿನಿ ಬಸ್, 15 ಮ್ಯಾಕ್ಸಿ ಕ್ಯಾಬ್, 40 ಜೀಪ್. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 117 ಮಾರ್ಗಗಳಲ್ಲಿ 46 ಬಸ್( ಕೆಎಸ್‌ಆರ್‌ಟಿಸಿ), 31 ಮಿನಿಬಸ್, 41 ಜೀಪ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 10 ಸಖಿ ಮತಗಟ್ಟೆಗಳು, 2 ವಿಶೇಷ ಚೇತನರ, 2 ಯುವ ಮತಗಟ್ಟೆಗಳು, 3 ಥೀಮ್ ಬೇಸ್‍ಡ್ ಮತಗಟ್ಟೆಗಳು, 2 ಎಥಿನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯವು ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸುಸೂತ್ರವಾಗಿ ನಡೆದಿದೆ ಎಂದರು.
ಚುನಾವಣೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿವೈಎಸ್‍ಪಿಗಳಾದ ಜಗದೀಶ್, ಮೋಹನ್ ಇತರರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಅಗತ್ಯ ಪೊಲೀಸ್ ನಿಯೋಜನೆ ಬಗ್ಗೆ ಮಾಹಿತಿ ನೀಡಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೋಟರಿ ವುಡ್ಸ್ ನಿಂದ ಚಾಮಾ೯ಡಿ ಬೈಕ್ ರೈಡ್*

ಏಪ್ರಿಲ್ 23, 2026

*ಕೊಡಗು : 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು*

ಏಪ್ರಿಲ್ 23, 2026

*ಶ್ರೀ ಭಗೀರಥ ಜಯಂತಿ : ಭಗೀರಥ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ : ಚಿ.ನಾ.ಸೋಮೇಶ್*

ಏಪ್ರಿಲ್ 23, 2026

*ಕೊಡಗು : 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು*

ಏಪ್ರಿಲ್ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಏ.23 : ಕೊಡಗು ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿಯ ಒಟ್ಟು 625 ಅಂಕಕ್ಕೆ 621 ಅಂಕವನ್ನು…

*ಶ್ರೀ ಭಗೀರಥ ಜಯಂತಿ : ಭಗೀರಥ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ : ಚಿ.ನಾ.ಸೋಮೇಶ್*

ಏಪ್ರಿಲ್ 23, 2026

*ಒಳ್ಳೆಯ ಸಂಸ್ಕಾರಕ್ಕೆ ಓದುವ ಅಭ್ಯಾಸ ಅಗತ್ಯ : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*

ಏಪ್ರಿಲ್ 23, 2026

*ಮತಾಂತರ ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆ*

ಏಪ್ರಿಲ್ 23, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.24 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 23, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.23 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 23, 2026

*10ನೇ ತರಗತಿ ಫಲಿತಾಂಶ : ಕೊಡಗು ಜಿಲ್ಲೆಗೆ 8ನೇ ಸ್ಥಾನ : 5,948 ವಿದ್ಯಾರ್ಥಿಗಳಲ್ಲಿ 5,742 ವಿದ್ಯಾರ್ಥಿಗಳು ಉತ್ತೀರ್ಣ*

ಏಪ್ರಿಲ್ 23, 2026

*SSKC ಪಿಯು ಕಾಲೇಜು, ಕೆ.ಆರ್ ಪೇಟೆ ವತಿಯಿಂದ AI ಆಧಾರಿತ ಹಾಜರಾತಿ ವ್ಯವಸ್ಥೆ ಅನುಷ್ಠಾನ : ಈ ಪ್ರದೇಶದಲ್ಲೇ ಮೊದಲ ಪ್ರಯತ್ನ*

ಏಪ್ರಿಲ್ 23, 2026

*ವಿಶ್ವ ಪುಸ್ತಕ ದಿನ : ಹೊತ್ತಿಗೆಯ ಜ್ಞಾನ ಬೇಕು ಹೊತ್ತು ಹೊತ್ತಿಗೆ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ*

ಏಪ್ರಿಲ್ 23, 2026

*ಕೊಡಗು ಜಿಲ್ಲೆಯ 102 ಗ್ರಾ.ಪಂ ಗಳಲ್ಲಿ 1200 ಸದಸ್ಯ ಸ್ಥಾನ ನಿಗದಿ :  ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ*

ಏಪ್ರಿಲ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.