ಮಡಿಕೇರಿ ಮೇ 9 : ವಿಧಾನಸಭಾ ಚುನಾವಣೆ ಸಂಬಂಧ ಮಸ್ಟರಿಂಗ್ ಕಾರ್ಯವು ನಗರದ ಸಂತ ಜೋಸೆಫರ ಶಾಲೆ ಮತ್ತು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆಯಿತು.
ವಿಧಾನಸಭಾ ಚುನಾವಣೆ ಸಂಬಂಧ ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ಎಲ್ಲಾ ಹಂತದ ಪೊಲಿಂಗ್ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ತಮಗೆ ಹಂಚಿಕೆಯಾದ ಮತಗಟ್ಟೆಯ ಸಂಖ್ಯೆಯನ್ನು ತಿಳಿದುಕೊಂಡು ನಿಗಧಿಪಡಿಸಿದ ಕೌಂಟರ್‍ಗೆ ತೆರಳಿ ತಮ್ಮ ಮತಗಟ್ಟೆಗೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡರು. ಬಳಿಕ ಸೆಕ್ಟರ್ ಅಧಿಕಾರಿಗಳಿಂದ ಚುನಾವಣೆ ಸಂಬಂಧ ಮಾಹಿತಿ ಪಡೆದು ಮತಗಟ್ಟೆ ಕಾರ್ಯನಿರ್ವಹಣೆಗೆ ಬೇಕಾಗಿರುವ ಸಾಮಗ್ರಿಗಳನ್ನು ಪಡೆದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕಾರ್ಯವಿಧಾನದ ಬಗ್ಗೆ ಹಲವು ಮಾರ್ಗದರ್ಶನ ಮಾಡಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬನಾ ಎಂ.ಶೇಖ್, ತಹಶೀಲ್ದಾರರಾದ ಪ್ರಶಾಂತ್, ರಾಮಚಂದ್ರ, ಇತರರು ಇದ್ದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರರಾದ ಕಿರಣ್ ಗೌರಯ್ಯ, ಎಸ್.ಎನ್.ನರಗುಂದ, ಚುನಾವಣಾ ತಹಶೀಲ್ದಾರ್ ರವಿಶಂಕರ್ ಹಾಗೂ ಸೆಕ್ಟರ್ ಅಧಿಕಾರಿಗಳು ಮಸ್ಟರಿಂಗ್ ಕಾರ್ಯನಿರ್ವಹಣೆ ಸಂಬಂಧ ಮೇಲ್ವಿಚಾರಣೆ ನಡೆಸಿ ಮತಗಟ್ಟೆ ಅಧಿಕಾರಿಗಳಿಗೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಬಳಿಕ ತಮ್ಮ ತಮ್ಮ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ತೆರಳಿದರು. ಮತಗಟ್ಟೆ ಅಧ್ಯಕ್ಷಾಧಿಕಾರಿ(ಪಿಆರ್‍ಒ), ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ(ಎಪಿಆರ್‍ಒ(1 ನೇ ಪೊಲಿಂಗ್ ಅಧಿಕಾರಿ), 2 ನೇ ಮತಗಟ್ಟೆ ಅಧಿಕಾರಿ(2ನೇ ಪೊಲಿಂಗ್ ಅಧಿಕಾರಿ), 3 ನೇ ಮತಗಟ್ಟೆ ಅಧಿಕಾರಿ(3 ನೇ ಪೊಲಿಂಗ್ ಅಧಿಕಾರಿ) ಅವರು ಮತಗಟ್ಟೆ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.
ಮತಗಟ್ಟೆ ಅಧಿಕಾರಿಗಳು ಪರಸ್ಪರ ಚರ್ಚಿಸಿದರು. ಸುಸೂತ್ರವಾಗಿ ಚುನಾವಣೆ ನಡೆಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಅವರು ನಿರ್ದೇಶನ ನೀಡಿದರು. ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಸಂಬಂಧ ಹಲವು ಮಾಹಿತಿ ಮಾರ್ಗದರ್ಶನ ನೀಡಿದರು.
ಚೆಕ್‍ಲಿಸ್ಟ್: ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್, ರಿಜಿಸ್ಟ್ರರ್ ಆಫ್ ವೋಟರ್ಸ್, ವೋಟರ್ ಸ್ಲಿಪ್, ಗುರುತು ಮಾಡಿರುವ ಮತದಾರರ ಪಟ್ಟಿ ಇತರ ಪ್ರತಿಗಳು, ಅಡ್ರಸ್ ಟ್ಯಾಗ್, ಟೆಂಡರ್ ಬ್ಯಾಲೆಟ್ ಪೇಪರ್, ಮತದಾರರ ಅಂಕಿ ಅಂಶಗಳು, ಅಭ್ಯರ್ಥಿಯ/ ಚುನಾವಣಾ ಏಜೆಂಟ್ ಅಭ್ಯರ್ಥಿಯ/ ಮಾದರಿ ಸಹಿಯ ಪ್ರತಿ, ಇಂಕ್, ಗ್ರೀನ್ ಪೇಪರ್ ಸೀಲು, ಮಾಕ್‍ಪೋಲ್ ಸೀಲು, ಹೀಗೆ ಚೆಕ್‍ಲಿಸ್ಟ್‍ನಂತೆ ನಮೂನೆ ಹಾಗೂ ಸಾಮಗ್ರಿಗಳನ್ನು ಪಡೆದರು.
ಲೇಖನ ಸಾಮಗ್ರಿಗಳಾದ ಪೆನ್ಸಿಲ್, ಪೆನ್ನು, ಬಿಳಿ ಹಾಳೆ, ಗುಂಡು ಪಿನ್ನು, ಸೀಲಿಂಗ್ ವ್ಯಾಕ್ಸ್, ಮತ ಹಾಕುವ ಅಂಕಣ, ದಾರ, ಸೂಜಿ, ಮೊಳೆ, ಮೇಣದ ಬತ್ತಿ, ರಬ್ಬರ್ ಬ್ಯಾಂಡ್, ಡ್ರಾಯಿಂಗ್ ಪಿನ್ಸ್, ಪಾಲಿಥಿನ್ ಬ್ಯಾಗ್, ಕವರ್‌ಗಳು ಹೀಗೆ ವಿವಿಧ ರೀತಿಯ ಸಾಮಗ್ರಿಗಳನ್ನು ಪಡೆದರು.
ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು ವಿವಿ ಪ್ಯಾಟ್‍ಗಳ ಸಂಬಂಧ ಪರಿಶೀಲಿಸಿ ಖಾತರಿಪಡಿಸಿಕೊಂಡರು. ಹೀಗೆ ಮಸ್ಟರಿಂಗ್ ಕಾರ್ಯ ಸಂಬಂಧಿಸಿದಂತೆ ಮಾಹಿತಿ ಪಡೆದು ತಮ್ಮ ಮತಗಟ್ಟೆಗಳಿಗೆ ತೆರಳಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 90 ಮಾರ್ಗಗಗಳಲ್ಲಿ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, 38 ಬಸ್( ಕೆಎಸ್‌ಆರ್‌ಟಿಸಿ), 11 ಮಿನಿ ಬಸ್, 15 ಮ್ಯಾಕ್ಸಿ ಕ್ಯಾಬ್, 40 ಜೀಪ್. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 117 ಮಾರ್ಗಗಳಲ್ಲಿ 46 ಬಸ್( ಕೆಎಸ್‌ಆರ್‌ಟಿಸಿ), 31 ಮಿನಿಬಸ್, 41 ಜೀಪ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 10 ಸಖಿ ಮತಗಟ್ಟೆಗಳು, 2 ವಿಶೇಷ ಚೇತನರ, 2 ಯುವ ಮತಗಟ್ಟೆಗಳು, 3 ಥೀಮ್ ಬೇಸ್‍ಡ್ ಮತಗಟ್ಟೆಗಳು, 2 ಎಥಿನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯವು ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸುಸೂತ್ರವಾಗಿ ನಡೆದಿದೆ ಎಂದರು.
ಚುನಾವಣೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿವೈಎಸ್‍ಪಿಗಳಾದ ಜಗದೀಶ್, ಮೋಹನ್ ಇತರರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಅಗತ್ಯ ಪೊಲೀಸ್ ನಿಯೋಜನೆ ಬಗ್ಗೆ ಮಾಹಿತಿ ನೀಡಿದರು.
Breaking News
- *ಕನ್ನಡ ಸಾಹಿತ್ಯ ಭವನ ನಿರ್ಮಾಣ : ಅಗತ್ಯ ಸಹಕಾರಕ್ಕೆ ಕೊಡಗು ಜಿಲ್ಲಾ ಕ.ಸಾ.ಪ ಮನವಿ*
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ ಉದ್ಘಾಟನೆ : ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ : ಶಾಸಕ ಡಾ.ಮಂತರ್ ಗೌಡ*
- *ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಲೇಔಟ್, ಮೆಗಾ ಟೌನ್ಶಿಪ್ಗೆ ವಿರೋಧ : ಕಡಂಗದಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
- *ಡಿ.8 ರಂದು ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ*
- *ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
- *ಕರಿಕೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ*
- *ವೀರ ಸೇನಾನಿಗಳಿಗೆ ಅಗೌರವ : ಡಿ.6ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ*
- *‘ಸ್ವಾಭಿಮಾನಿ’ ಸಮಾವೇಶದಲ್ಲಿ ಕೊಡಗಿನಿಂದ 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ*
- *ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಗೆ ಸನ್ಮಾನ*