ಮಡಿಕೇರಿ ಮೇ 9 : ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ನಗರದ ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ರಾಜಕಾರಣಿ ಮಿಟ್ಟು ಚಂಗಪ್ಪ ಹಾಗೂ ಪತ್ನಿ ಯಶಿ ಚಂಗಪ್ಪ ಅವರು ಮೇ 10 ರಂದು ಬೆಳಗ್ಗೆ 7 ಗಂಟೆಗೆ 30 ನೇ ಬಾರಿಗೆ ಮೊದಲಿಗರಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಲಿದ್ದಾರೆ.
ಎಐಸಿಸಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿರುವ 82 ವರ್ಷದ ಮಿಟ್ಟು ಚಂಗಪ್ಪ ಅವರು ಯುವ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ. ಅಭಿಮಾನಿಗಳು ಮಿಟ್ಟು ಅವರನ್ನು ಕೊಡಗು ಕಾಂಗ್ರೆಸ್ ನ ಭೀಷ್ಮ ಎಂದೇ ಕರೆಯುತ್ತಾರೆ.









