ಸುಂಟಿಕೊಪ್ಪ ಮೇ 9 : ನಾಕೂರು – ಶಿರಾಂಗಾಲ ಗ್ರಾಮದ ದಿವಂಗತ ರಾಜಪ್ಪ ಮಾಸ್ಟರ್ ಅವರ ಪುತ್ರ, ಪ್ರಸ್ತುತ ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿ ನೆಲೆಸಿದ್ದ ವಕೀಲ ಎಸ್.ಆರ್.ಬಸಪ್ಪ (69) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.









