ಮಡಿಕೇರಿ ಮೇ 9 : ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿ ನಗರದ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಆರ್.ರಿದಾ ಸುಮನ್ 625 ಕ್ಕೆ 615 ಅಂಕಗಳನ್ನು ಪಡೆದು ಶೇ. 98.4 ರಷ್ಟು ಫಲಿತಾಂಶದೊoದಿಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಕನ್ನಡ 125, ಇಂಗ್ಲೀಷ್ 100, ಹಿಂದಿ 99, ವಿಜ್ಞಾನ 100, ಗಣಿತ 93, ಸಮಾಜ ವಿಜ್ಞಾನ 98 ಅಂಕ ಪಡೆದಿದ್ದಾಳೆ. ಈಕೆ ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರೂಪಕ ಬಿ.ಎಸ್.ರಫೀಕ್ ಅಹ್ಮದ್ ಹಾಗೂ ರೈಹಾನ ದಂಪತಿಯ ಪುತ್ರಿ.










