ಸೋಮವಾರಪೇಟೆ ಮೇ 9 : ಹತ್ತನೇ ತರಗತಿಯಲ್ಲಿ ಸೋಮವಾರಪೇಟೆ ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆ, ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ಆಂಗ್ಲಮಾಧ್ಯಮ ಶಾಲೆ, ಓಎಲ್‌ವಿ ಆಂಗ್ಲ ಮಾಧ್ಯಮ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿವೆ.
ನೇರುಗಳಲೆ ಶಾಲೆಯಲ್ಲಿ 18 ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಅತ್ಯುನ್ನತ ಶ್ರೇಣಿ, 14 ಉನ್ನತಶ್ರೇಣಿ, 3 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಲಾಂಛನ್ ಶೇ.86, ನಿಶಾಂತ್ ಶೇ.85, ನವೀನ್ ಶೇ.84 ಅಂಕಗಳಿಸಿದ್ದಾರೆ.
ಕುವೆoಪು ಶಾಲೆಯಲ್ಲಿ 44 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 26 ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವೈ.ಎಸ್.ಧನ್ಯ ಶಾಲೆಗೆ ಟಾಪರ್ ಆಗಿದ್ದು, 907 ಅಂಕಗಳೊoದಿಗೆ ಶೇ.97.12, ಎಸ್.ವೈ.ಹಿಮಾನಿ ಶೇ. 95.36, ಸಿ.ಎಸ್.ಸೂರ್ಯ 95.36, ಪುಷ್ಪಾಂಜಲಿ ಶೇ.93, ಅಮೃತ್ ಶೇ.93 ಅಂಕಗಳಿಸಿದ್ದಾರೆ.
ಓಎಲ್‌ವಿ ಶಾಲೆ 83 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 32 ಉನ್ನತಶ್ರೇಣಿ, 14 ದ್ವಿತೀಯ ಶ್ರೇಣಿ, 11 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕೆ.ಎಸ್.ಅನುಜ್ ಶೇ.98.72 ಅಂಕಗಳೊoದಿಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ದಿವಿನ್ 98.23, ಸಹನಾ 97.92 ಅಂಕಗಳನ್ನು ಪಡೆದಿದ್ದಾರೆ. ಸೋಮವಾರಪೇಟೆ ತಾಲ್ಲೂಕಿಗೆ ಶೇ.95.26 ಫಲಿತಾಂಶ ಸಿಕ್ಕಿದೆ. ತಾಲ್ಲೂಕಿನ ಹತ್ತು ಸರ್ಕಾರಿ ಶಾಲೆಗಳು ಶೇ.100ರಷ್ಟು ಫಳಿತಾಂಶ ಪಡೆದಿವೆ. ಸರ್ಕಾರಿ ಶಾಲೆಗಳಾದ ಹಂಡ್ಲಿ, ನಿಡ್ತ, ಕಾನ್‌ಬೈಲ್, ಮಾದಾಪುರ, ಸೂರ್ಲಬ್ಬಿ, ನೇರುಗಳಲೆ, ಗೋಣಿಮರೂರು, ತೊರೆನೂರು, ಬಸವನಹಳ್ಳಿ, 7ನೇ ಹೊಸಕೋಟೆ ಪ್ರೌಢಶಾಲೆಗಳು.










