ಮಡಿಕೇರಿ ಮೇ 9 : ಶಸ್ತ್ರ ಚಿಕಿತ್ಸೆಯ ನಂತರ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿರುವ ತರುಣೇಶ ಡಿ.ಎಸ್ ದೇವಗೋಂಡಿ ಅವರಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ಆರ್ಥಿಕ ನೆರವನ್ನು ನೀಡಿತು.
ನಗರದ ಬಾಲಭವನದಲ್ಲಿ ಧನ ಸಹಾಯ ಹಸ್ತಾಂತರಿಸುವ ಸಂದರ್ಭ ಸಂಸ್ಥೆಯ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ಸದಸ್ಯರುಗಳಾದ ಉಮಾಗೌರಿ, ಮಲ್ಲಿಗೆ ಪೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ತರುಣೇಶ ಅವರು 4 ವರ್ಷಗಳ ಹಿಂದೆ ದೃಷ್ಟಿಯನ್ನು ಕಳೆದುಕೊಂಡಿದ್ದರು.










