ಮಡಿಕೇರಿ ಮೇ 11 : ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪ.ಪೂ.ಕಾಲೇಜು ಕೋರಂಗಾಲ (ಭಾಗಮಂಡಲ) ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ,ಇಲ್ಲಿನ ಪ್ರಥಮ ಪಿಯುಸಿ ತರಗತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ವಿದ್ಯಾರ್ಥಿಗಳು ದಿನಾಂಕ:08/05/2023 ರಿಂದ ದಿ: /05/2023ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ SC/ST/C1 ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ ರೂಪಾಯಿ 250000/- ಮತ್ತು 2ಂ, 2ಃ, 3ಂ ಮತ್ತು 3ಃ ಇವರ ಪೋಷಕರ ವಾರ್ಷಿಕ ವರಮಾನ ರೂಪಾಯಿ 100000/- ಆಗಿರಬೇಕು. ಉಚಿತ ಊಟ, ವಸತಿ ಸೌಲಭ್ಯ ಹಾಗೂ ನೋಟ್ ಬುಕ್ ಪುಸ್ತಕ ಇತ್ಯಾದಿ ಸೌಲಭ್ಯಗಳು ಇರುತ್ತದೆ.
ಅರ್ಜಿಗಳನ್ನು ತಮ್ಮ ಹತ್ತಿರದ ಮೊರಾರ್ಜಿ ದೇಸಾಯಿ,ಅಟಲ್ ಬಿಹಾರಿ ವಾಜಪೇಯಿ ಕಿತ್ತೂರು ರಾಣಿ ಚೆನ್ನಮ್ಮ ಡಾ. ಬಿ.ಆರ್. ಅಂಬೇಡ್ಕರ್/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಿಂದ ಪಡೆದು ಅಥವಾ https://kreis.karnataka.gov.in/ ಇಲ್ಲಿಂದ download ಮಾಡಿಕೊಂಡು ಅದೇ ಶಾಲೆಯಲ್ಲಿ ಅಥವಾ ನಮ್ಮ ಕಾಲೇಜಿಗೆ ಬಂದು ಸಲ್ಲಿಸಬಹುದು. ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ಕಾಲೇಜಿನಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9611307646 -ಲೋಕೇಶ್ (ಪ್ರಾಂಶುಪಾಲರು )
+918217090118-ದೀಪಕ್ (ವಾರ್ಡನ್ )