ಮಡಿಕೇರಿ ಮೇ 12 : ಗೋಣಿಕೊಪ್ಪಲಿನ ಕೋಟೂರು ಗ್ರಾಮದ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ವರ್ಷದ ಬಾಲಕಿ ಸಾವಿಗೀಡಾಗಿದೆ.
ಪೆಮ್ಮಂಡ ರೋಶನ್, ಇಸು ದಂಪತಿ ಪುತ್ರಿ ಸಿಯಾನ್ (3) ಮೃತ ಕಂದಮ್ಮ. ಬುಧವಾರ ಸಂಜೆ ಬಲೂನ್ನಲ್ಲಿ ಆಟವಾಡುತ್ತಿದ್ದಾಗ ಮನೆಯ ಸಮೀಪವಿದ್ದ ಬಾವಿಗೆ ಬಲೂನ್ ಬಿದ್ದಿದೆ. ಇದನ್ನು ತೆಗೆಯಲು ಪ್ರಯತ್ನಿಸುತ್ತಿದ್ದ ಸಂದರ್ಭ ಬಾಲಕಿ ಬಾವಿಗೆ ಜಾರಿ ಬಿದ್ದಿದೆ ಎನ್ನಲಾಗಿದೆ. ಮನೆಯ ಒಳಗೆ ಇದ್ದ ಪಾಲಕರು ಮಗುವನ್ನು ಹುಡುಕಿಕೊಂಡು ಬಂದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಯಿತು.
ಬೀರ್ಯ ಕೊಡವ ಸಿನಿಮಾದಲ್ಲಿ ಸಿಯಾನ್ ಪಾತ್ರ ಮಾಡಿದ್ದು, ಸಾರ್ವಜನಿಕವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.