ಮಡಿಕೇರಿ ಮೇ 13 : ಕೊಡಗಿನ ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಾಕ್ಕೆ ಅಧಿಕ ಮತಗಳು ಚಲಾವಣೆಯಾಗಿದೆ. ವೀರಾಜಪೇಟೆ ಕ್ಷೇತ್ರದಲ್ಲಿ 1636 ಮಂದಿ ನೋಟಾಕ್ಕೆ ಮತ ಚಲಾಯಿಸುವ ಮೂಲಕ ಮೂರನೇ ಸ್ಥಾನ ಮತ್ತು ಮಡಿಕೇರಿ ಕ್ಷೇತ್ರದಲ್ಲಿ 1516 ಮಂದಿ ನೋಟಾಕ್ಕೆ ಮತಹಾಕಿ ನಾಲ್ಕನೇ ಸ್ಥಾನ ನೀಡಿದ್ದಾರೆ.
ಕಳೆದ ಬಾರಿಯು ಮಡಿಕೇರಿ ಕ್ಷೇತ್ರದಲ್ಲಿ 1615 ಮತ ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ 1733 ಮತಗಳು ನೋಟಾಕ್ಕೆ ಚಲಾವಣೆಯಾಗಿದ್ದವು.









