ವಿರಾಜಪೇಟೆ ಮೇ 17 : ತುರ್ತು ಕರೆಗೆ ಸ್ಪಂದಿಸಿ ರಾತ್ರಿ ವೇಳೆಯಲ್ಲಿ ರಕ್ತದಾನ ಮಾಡಿದ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಸದಸ್ಯ ಯಾಸಿನ್ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿನ ಸ್ವಾಮಿ ವಿವೇಕಾನಂದ ರಕ್ತ ನಿಧಿ ಘಟಕದಿಂದ ಕರೆ ಬಂದ ತಕ್ಷಣವೇ ರಾತ್ರಿ 1 ಗಂಟೆಯ ಸಮಯದಲ್ಲಿ ಹೋಗಿ ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.








