ಮಡಿಕೇರಿ ಮೇ 17 : ಕೌಶಲ್ಯ ತರಬೇತಿ ಪಡೆಯುತ್ತಿರುವ ವಿದ್ಯಾಥಿ೯ಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನೆರವು ನೀಡಲಾಯಿತು.
ದೇವರಕೊಲ್ಲಿ ಗ್ರಾಮದ ಕೆ.ಎಂ.ಜೀವನ್ ಅವರ ತಂದೆ ಎರಡು ವಷ೯ಗಳ ಹಿಂದೆ ಸಿಡಿಲು ಬಡಿದು ಹಾಸಿಗೆ ಹಿಡಿದಿದ್ದಾರೆ. ತಾಯಿಯೋವ೯ರೇ ದುಡಿದು ಮಗನ ಶಿಕ್ಷಣಕ್ಕೆ ನೆರವಾಗುತ್ತಿದ್ದು, ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ವಿದ್ಯಾಥಿ೯ ದಶ೯ನ್ ಗೆ ಅಗತ್ಯವಿದ್ದ ಮೊಬೈಲ್ ಫೋನ್ ನೀಡಿ ತಾಂತ್ರಿಕವಾಗಿ ಸಹಾಯ ಮಾಡಲಾಯಿತು. ಅಂತೆಯೇ ಡಾ.ಎಂ.ಜಿ.ಪಾಟ್ಕರ್ ಕೂಡ ದಶ೯ನ್ ಗೆ ಆಥಿ೯ಕ ನೆರವು ನೀಡಿದರು.
ಮಡಿಕೇರಿಯ ಹಿರಿಯ ಲೆಕ್ಕಪರಿಶೋಧಕ ಅನಂತಸುಬ್ಬರಾವ್ ಪುತ್ರಿ ವಿದ್ಯಾ ವಿಷ್ಣುಕಿರಣ್ ಅವರು ಕೊಡುಗೆಯಾಗಿ ನೀಡಿದ ಸ್ಮಾಟ್೯ ಫೋನ್ ನ್ನು ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾಸುಧಾಕರ್, ಕಾಯ೯ದಶಿ೯ ಲಲಿತಾ ರಾಘವನ್ , ಸದಸ್ಯರಾದ ಜಯಲಕ್ಷ್ಮೀ ಪಾಟ್ಕರ್, ಸಲೀಲಾ ಪಾಟ್ಕರ್, ಉಮಾಗೌರಿ, ಮಲ್ಲಿಗೆ ಪೈ, ಆಗ್ನೇಸ್ ಮುತ್ತಣ್ಣ, ಲತಾ ಚಂಗಪ್ಪ, ಲಕ್ಷ್ಮೀ ಈಶ್ವರ್ ಭಟ್, ದಾನಿಗಳಾದ ಅನಂತ ಸುಬ್ಬರಾವ್, ಡಾ.ಎಂ.ಜಿ.ಪಾಟ್ಕರ್ ಈ ಸಂದಭ೯ ಹಾಜರಿದ್ದರು.
















