ಕೊಡ್ಲಿಪೇಟೆ ಮೇ 18 : ನೀರಗುಂದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ 21ರ ಬಾನುವಾರ ಪುಣ್ಯಾಹ, ಪಂಚಗವ್ಯ, ಗಣಪತಿ ಪೂಜೆ, ಮಹಾಸಂಕಲ್ಪ, ಕಂಕಣಧಾರಣ, ಆದಿತ್ಯಾದಿ ನವಗ್ರಹ ಸಹಿತ ಪರಿವಾರ ದೇವತೆಗಳ ಕಳಸ ಸ್ಥಾಪನೆ, ನಂತರ ದೇವರ ವಿಗ್ರಹಕ್ಕೆ ಜಲಾಧಿವಾಸ, ಕ್ಷೀರಾಧಿವಾಸ, ನೇತ್ರಬಿಂಬ ಶುದ್ದಿ, ಜೀವಕಳೆ, ತೈಲವಾಸ, ಪುಪ್ಪವಾಸ ಸುವರ್ಣವಾಸ, ಧಾನ್ಯಾಧಿವಾಸ ಮಾಡಿ ವಾಸ್ತು ರಾಠೋಡ್ ಹೋಮ, ತತ್ವ ಹೋಮಗಳಿಂದ ಪೂರ್ಣಾಹುತಿ, ವಾಸ್ತುಬಲಿ ನಂತರ ಮಹಾಮಂಗಳಾರತಿ ಇರುತ್ತದೆ.
22ರ ಸೋಮವಾರ ಬೆಳಿಗ್ಗೆ 6.00 ಗಂಟೆಯಿಂದ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ನೇತ್ರ ಮಿಲನ, ಅಲಂಕಾರ, ನಂತರ ಗಣಪತಿಹೋಮ, ನವಗ್ರಹ ಹೋಮ, ಪ್ರಧಾನ ದುರ್ಗಾ ಹೋಮ, ಪೂರ್ಣಾಹುತಿ, ತದನಂತರ ಬಲಿಪ್ರಧಾನ ಹಾಗೂ ಮಹಾಮಂಗಳಾರತಿ ಇರುತ್ತದೆ. ಅಂದು ರಾತ್ರಿ 10-00 ಗಂಟೆಗೆ ಹೇಮಾವತಿ ನದಿಗೆ ತೆರಳಿ ನೂತನ ವಿಗ್ರಹ ಪೂಜೆ ಮಾಡಿ ಕಳಸದೊಂದಿಗೆ ದೇವಾಲಯ ತಲುಪುವುದು ಮುಂಜಾನೆ 5 ಗಂಟೆಗೆ ಕೆಂಡೋತ್ಸವ ಇರುತ್ತದೆ.
ಈ ಎಲ್ಲಾ ಪೂಜಾ ಕೈಕರ್ಯಗಳನ್ನು ಶ್ರೀ ಶ್ರೀ ಸದಾಶಿವಸ್ವಾಮಿಗಳು, ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಶ್ರೀ ಮಹಾಂತಸ್ವಾಮಿಗಳು, ಶ್ರೀ ಕ್ಷೇತ್ರ ಕಲ್ಲುಮಠದ ಮಠಾಧ್ಯಕ್ಷರಾದ ಶ್ರೀ ಶ್ರೀ ಕ್ಷೇತ್ರ ಕಲ್ಲಳ್ಳಿ ಮಠಾಧ್ಯಕ್ಷರಾದ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಇವರುಗಳ ದಿವ್ಯ ಸಾನಿದ್ಯದಲ್ಲಿ ಹಾಗು ಪ್ರಧಾನ ಅರ್ಚಕರು ಪಂ॥ ಮಣಿಕಂಠರವರು ಹಾಗು ಅರ್ಚಕರಾದ ಚಂದ್ರಯ್ಯನವರು ನೆರವೇರಿಸಲಿದ್ದಾರೆ. ಆ ಪೂಜಾ ದಿನಗಳಂದು ನಿರಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.