
ಮಡಿಕೇರಿ NEWS DESK ಫೆ.23 : ಮಡಿಕೇರಿ ತಾಲ್ಲೂಕು ನೋಟರಿಗಳಾಗಿ ಮಡಿಕೇರಿ ವಕೀಲರ ಸಂಘದ ಅಚ್ಚಾಂಡಿರ ಪವನ್ ಪೆಮ್ಮಯ್ಯ ಹಾಗೂ ಸುನಿಲ್ ಕುಮಾರ್ ಜೆ. ನೇಮಕಗೊಂಡಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ಕಂದಾಯ ತಾಲ್ಲೂಕಿಗೆ ಹೆಚ್ಚುವರಿಯಾಗಿ ಸೃಷ್ಟಿಸಿರುವ ಎರಡು ನೋಟರಿ ಹುದ್ದೆಗಳಿಗೆ ಸರಕಾರ ಇವರನ್ನು ನೇಮಕ ಮಾಡಿದೆ. ಅಚ್ಚಾಂಡಿರ ಪವನ್ ಪೆಮ್ಮಯ್ಯ ಅವರು ಮಡಿಕೇರಿ ವಕೀಲರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ.








