ಮಡಿಕೇರಿ ಮೇ 19 : ಹಾಕಿ ಇಂಡಿಯಾ ವತಿಯಿಂದ ರೂರ್ಕೆಲಾದ ಒಡಿಶಾದಲ್ಲಿ ಮೇ 28ರ ವರೆಗೆ ನಡೆಯಲಿರುವ ಸಬ್‍ಜೂನಿಯರ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ 13ನೇ ಹಾಕಿ ಕರ್ನಾಟಕ ತಂಡದ ಹಾಕಿ ನಾಯಕನಾಗಿ ಕೊಡಗಿನ ಕೆ.ಡಿ.ಹೃತಿಕ್ ಅಯ್ಯಪ್ಪ ಆಯ್ಕೆಯಾಗಿದ್ದಾರೆ.
ತಂಡದ ಬಹುತೇಕ ಆಟಗಾರರು ಕೊಡಗು ಮೂಲದವರಾಗಿದ್ದಾರೆ.
ತಂಡವನ್ನು ಕೊಡಗಿವರಾದ ಟಿ.ಬಿ.ಕೃಶಾಂಕ್ ಕಾಳಪ್ಪ, ಕುಶಾಲ್ ನಂಜಪ್ಪ, ಎಂ.ನಿಶಾಂತ್, ಎಸ್.ಎಲ್.ವಚನ್ ಉತ್ತಪ್ಪ, ಬಿ.ಕೆ.ವಿಖ್ಯಾತ್ ಮಂದಣ್ಣ, ಎಂ.ಎಂ.ಅಚ್ಚಯ್ಯ, ಬಿ.ಪಿ.ಸಂಪನ್ ಗಣಪತಿ, ಕೆ.ವಿ.ವಿಶ್ವಜಿತ್, ಜಿ.ಸುಪ್ರಿತ್, ಸಿ.ಆರ್.ವರುಣ್ ಮಾದಪ್ಪ, ಕೆ.ಎಸ್.ಉತ್ತಪ್ಪ, ಎಂ.ಸಿ.ಜಶನ್ ತಿಮ್ಮಯ್ಯ, ವಿ.ವಿ.ಕಾರ್ತಿಕ್ ಕಾರ್ಯಪ್ಪ ಪ್ರತಿನಿಧಿಸಲಿದ್ದಾರೆ.














