ಮಡಿಕೇರಿ ಮೇ 27 : ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟದಲ್ಲಿ ನಡೆದಿದೆ.
ಕಾಫಿ ತೋಟದ ಮಧ್ಯೆ 11 ಕೆ.ವಿ.ಸಾಮಥ್ರ್ಯದ ವಿದ್ಯುತ್ ತಂತಿ ಹಾದುಹೋಗಿತ್ತು. ಇದು ಸೊಂಡಿಲಿಗೆ ತಗುಲಿ ಆನೆ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







