ಮಡಿಕೇರಿ ಮೇ 31 : ಪೊಲೀಸ್ ಠಾಣೆಗಳಿಗೆ ತೆರಳಿ ದೂರು ನೀಡುವ ದೂರುದಾರರ ನೆರವಿಗೆ ಪೊಲೀಸ್ ಕಂಟ್ರೋಲ್ ರೂಂ ಸಿದ್ಧವಿದೆ ಎಂದು ಎಸ್.ಪಿ ಕೆ ರಾಜರಾಮನ್ ತಿಳಿಸಿದ್ದಾರೆ.ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡ 23 ಮಂದಿಗೆ ಮೊಬೈಲ್‍ಗಳನ್ನು ಹಿಂತಿರುಗಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ದೂರು ನೀಡಲು ತೆರಳುವವರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆ ಮಾಹಿತಿಯನ್ನು ಕಂಟ್ರೋಲ್ ರೂಂ ಪಡೆದುಕೊಂಡು ದೂರುದಾರರನ್ನು ಸಂಪರ್ಕಿಸುತ್ತದೆ. ಬಳಿಕ ಠಾಣೆಗೆ ತೆರಳಿದ ಉದ್ದೇಶ, ದೂರಿನ ಮಾಹಿತಿ ಪಡೆದು ಕೊಳ್ಳಲಾಗುತ್ತದೆ. ಅಲ್ಲದೇ ಠಾಣೆಗಳಲ್ಲಿ ಸೂಕ್ತ ಸ್ಪಂದನೆ ದೊರೆತಿದೆಯೇ ? ಅಧಿಕಾರಿ, ಸಿಬ್ಬಂದಿ ಗೌರವಯುತವಾಗಿ ನಡೆದುಕೊಂಡಿದ್ದಾರೆಯೇ, ನೀಡಿರುವ ದೂರಿಗೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಮಾಹಿತಿಯನ್ನು ದೂರುದಾರರಿಂದ ಪಡೆದುಕೊಳ್ಳಲಾಗುತ್ತದೆ.
ಈ ಸಂದರ್ಭ ಯಾವುದಾದರೂ ಠಾಣೆಗಳಲ್ಲಿ ಸೂಕ್ತ ಸ್ಪಂದನೆ ದೊರೆತ್ತಿಲ್ಲ ಎಂಬ ಬಗ್ಗೆ ದೂರುದಾರರು ತಿಳಿಸಿದರೆ, ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಈ ಸಂಬಂಧ ಕೆಲವೊಂದು ದೂರುಗಳು ಬಂದಿದ್ದು, ಇಲಾಖಾ ವಿಚಾರಣೆ ಕೈಗೊಳ್ಳಲಾಗಿದೆ ಎಂದು ರಾಮರಾಜನ್ ವಿವರಿಸಿದರು.
ಮೊಬೈಲ್ ಕಳುವಾದರೆ ceir.gov.in ವೆಬ್‍ಸೈಟ್ ಮೂಲಕ ದೂರು ನೀಡಬಹುದಾಗಿದೆ. ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ಸಮರ್ಪಕವಾಗಿ ದಾಖಲು ಮಾಡಿದರೆ, ಆ ಬಗ್ಗೆ ಸ್ಥಳೀಯ ಠಾಣೆಗಳಿಗೆ ಮಾಹಿತಿ ಬರುತ್ತದೆ. ಬಳಿಕ ತನಿಖೆ ಕೈಗೊಂಡು ಮೊಬೈಲ್‍ಗಳನ್ನು ಪತ್ತೆ ಮಾಡಲಾಗುತ್ತದೆ. ನಾಗರಿಕರು ಈ ವೆಬ್‍ಸೈಟ್‍ನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭ ಸೆನ್ ಪೊಲೀಸ್ ಠಾಣೆಯ ನಿರೀಕ್ಷಕ ಜಿ.ಕೆ.ರಾಘವೇಂದ್ರ ಹಾಗೂ ಸಿಬ್ಬಂದಿ ಹಾಜರಿದ್ದರು.