ಚೆಯ್ಯಂಡಾಣೆ ಮೇ 31 :ವಿರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾಸಭೆ ಗೋಣಿಕೊಪ್ಪ ಮದರಸದಲ್ಲಿ ನಡೆಯಿತು.
ಖತೀಬ್ ಮುಹಮ್ಮದಲಿ ಫೈಝಿ ಸಭೆಯನ್ನು ಉದ್ಘಾಟಿಸಿದರು. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023-24 ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ.ಅಬ್ದುಲ್ ರಹಮಾನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್, ಎಂ.ಸಿ.ಅಶ್ರಫ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಫೈಝಿ, ಸಹ ಕಾರ್ಯದರ್ಶಿಯಾಗಿ ಮುಹಮ್ಮದ್ ಶುಹೈಬ್ ಫೈಝಿ ಹಾಗೂ ರಫೀಕ್ ಬಾಖವಿ, ಕೋಶಾಧಿಕಾರಿಯಾಗಿ ಕೆ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ನೇಮಕ ಮಾಡಲಾಯಿತು.
ಪರೀಕ್ಷಾ ಬೋರ್ಡ್ ಅಧ್ಯಕ್ಷರಾಗಿ ಅಬ್ದುಲ್ಲ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ರಶೀದ್ ದಾರಿಮಿ, ಐಟಿ ಸಂಯೋಜಕರಾಗಿ ಮಜೀದ್ ಬಾಖವಿ, ಮುಸಾಬಕ ಅಧ್ಯಕ್ಷರಾಗಿ ರಶೀದ್ ದಾರಿಮಿ, ಸಂಚಾಲಕರಾಗಿ ಜುನೈದ್ ಫೈಝಿ, ಎಸ್ಕೆಎಸ್ಬಿವಿ ಅಧ್ಯಕ್ಷರಾಗಿ ಅಬ್ದುಲ್ ಹಕೀಂ ಅಲ್ ಹಿಶಾಮಿ, ಸಂಚಾಲಕರಾಗಿ ಸಹದ್ ಫೈಝಿ, ಮುಹಲಿಮ್ ಡೇ ಸಂಚಾಲಕರಾಗಿ ಮುಹಮ್ಮದ್ ರೌಫ್ ಹುದವಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಫೈಝಿ ಸರ್ವರನ್ನು ವಂದಿಸಿದರು.
ವರದಿ : ಅಶ್ರಫ್