ಮಡಿಕೇರಿ ಜೂ.1 : ಪಕ್ಷದ ಪರವಾಗಿ ದುಡಿದವರಿಗೆ ಅಕಾಡಮಿ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಇದೀಗ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಇಬ್ಬರು ಶಾಸಕರೂ ಪರಿಣತರಾಗಿದ್ದು, ಒಬ್ಬರಿಗಾದರೂ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಗೆ ಹೆಚ್ಚು ಮತ ಬರುತ್ತಿದ್ದ ಕಡೆಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚು ಮತ ಬಂದಿದೆ. ಸಂಪಾಜೆ ಪೆರಾಜೆ ಭಾಗದಲ್ಲಿ ಒಂದಂಕಿ ಇಂದ ಎರಡಂಕಿಗೆ ಮತ ಏರಿಕೆಯಾಗಿದೆ ಆದ್ದರಿಂದ ಮುಂದಿನ ಅಕಾಡೆಮಿ, ನಿಗಮ ಮಂಡಳಿಗಳಿಗೆ ಪಕ್ಷದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ, ಪಕ್ಷಪರ ದುಡಿದವರಿಗೆ ಸ್ಥಾನ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್ ಮಾತನಾಡಿ, ಕಾಂಗ್ರೆಸ್ ಗೆಲುವಿನಲ್ಲಿ ಸಂಪಾಜೆ, ಚೆಂಬು, ಬೆಟ್ಟಗೇರಿ ಭಾಗಗಳಲ್ಲಿ ಬಹುಸಂಖ್ಯತರಾದ ಅರೆಭಾಷಿಕ ಸಮುದಾಯದವರು ಮಹತ್ತರ ಪಾತ್ರವಹಿಸಿದ್ದಾರೆ. ಬದಲಾವಣೆ ದೃಷ್ಠಿಯಿಂದ ಪ್ರಬುದ್ಧ ಅಭ್ಯರ್ಥಿಗೆ ಮತ ನೀಡಿದ್ದು, ಶಾಸಕರು ಅರೆಭಾಷೆ ಗೌಡ ಜನಾಂಗದ ಮೇಲೆ ಅಭಿಮಾನವಿಟ್ಟು ಪಕ್ಷದ ನಿಷ್ಠಾವಂತ ಭಾಷಿಕರಿಗೆ ನಿಗಮ ಕೊಡಬೇಕು, ಜನಾಂಗಕ್ಕೆ ಹೆಚ್ಚು ಆದ್ಯತೆ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಪೋಕ್ಲು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಕೊಡಗನ ತೀರ್ಥ ಪ್ರಸಾದ್ ಮಾತನಾಡಿ, ಹಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ‘ನಲ್ಲಿ’ ಅಳವಡಿಸಲಾಗಿದ್ದು, ನೀರು ಸರಿಯಾಗಿ ದೊರೆಯುತ್ತಿಲ್ಲ. ಅಲ್ಲದೆ ಜಮ್ಮ ಬಾಣೆ ಸೇರಿದಂತೆ ಹಲವು ಸಮಸ್ಯೆಗಳ ಜಿಲ್ಲೆಯಲ್ಲಿದ್ದು, ಶಾಸಕರು ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಅದನ್ನು ಪರಿಹರಿಸುವ ಕೆಲಸ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸೇವಾದಳದ ಅಧ್ಯಕ್ಷ ಕೊಲ್ಯದ ಗಿರೀಶ್, ಕಾಂಗ್ರೆಸ್ ಮುಖಂಡ ಎನ್.ಜಿ.ಉಮೇಶ್ ಉಪಸ್ಥಿತರಿದ್ದರು.
Breaking News
- *ಕೊಡಗಿನ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ : ಅಧಿಕಾರಿಗಳಿಗೆ 2 ತಿಂಗಳ ಗಡುವು*
- *ಸಿಎನ್ಸಿಯಿಂದ “ಕೊಡವ ನ್ಯಾಷನಲ್ ಡೇ” ಮತ್ತು ಸಂವಿಧಾನ ದಿನಾಚರಣೆ : 9 ಪ್ರಮುಖ ನಿರ್ಣಯಗಳ ಮಂಡನೆ*
- *ಮಡಿಕೇರಿ : ನ.27 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಸಿವಿಲ್ ನ್ಯಾಯಾಧೀಶೆ ಶುಭ*
- *ವಿರಾಜಪೇಟೆಯಲ್ಲಿ ನ.27 ರಂದು ಕಾವೇರಿ ಕಾರ್ನಿವಾಲ್ ಫೆಸ್ಟ್*
- *ಚೆಟ್ಟಳ್ಳಿ ಗ್ರಾ.ಪಂ ಉಪಚುನಾವಣೆ : ಅಯ್ಯಂಡ್ರ ಭಾಗೀರಥಿ ಗೆಲುವು*
- *ಸಹಕಾರ ತರಬೇತಿ (ಡಿಸಿಎಂ)ಗೆ ಅರ್ಜಿ ಆಹ್ವಾನ*
- *ತ್ಯಾಗರಾಜ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ : ಪರಿಸರರೊಂದಿಗೆ ಮಕ್ಕಳು ಬೆಳೆಯಬೇಕು : ಗೀತಾ ಗಿರೀಶ್*
- *ಮಡಿಕೇರಿಯಲ್ಲಿ ಸಂವಿಧಾನ ದಿನಾಚರಣೆ : ರಾಷ್ಟ್ರದ ಅಭಿವೃದ್ಧಿಗೆ ಸಂವಿಧಾನ ಪಾತ್ರ ಪ್ರಮುಖ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ*
- *ಪುತ್ತೂರು : ವಿಸಿಇಟಿಯಲ್ಲಿ ಮಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ*