ಬೆಂಗಳೂರು : ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಅಗತ್ಯ ನೆರವು ನೀಡಲು ಹಾಗೂ ಸುರಕ್ಷತೆಯ ಮಾಹಿತಿ ಒದಗಿಸಲು ರಾಜ್ಯ ತುರ್ತು ನಿರ್ವಹಣಾ ಕೇಂದ್ರ (SEOC)ದಲ್ಲಿ ನಾಗರೀಕರ ಅನುಕೂಲಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ.
ದೂರವಾಣಿ ಸಂಖ್ಯೆ: 1070, 080-22253707, 080-22340676 ಕ್ಕೆ ಕರೆಮಾಡಿ ಮಾಹಿತಿ ಅಥವಾ ನೆರವು ಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.










