ಮಡಿಕೇರಿ ಜೂ.8 : ಮಡಿಕೇರಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆ ನಗರದ ಹೊರವಲಯದಲ್ಲಿ ರುವ ಕೂಟುಹೊಳೆಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಇಡಿ ನಾಡಿಗೆ ನೀರುಣಿಸುವ ಕಾವೇರಿಯ ತವರಿನಲ್ಲಿ ಈ ರೀತಿಯಗಿ ನಡೆದಿರೋದು ಬೇಸರದ ವಿಚಾರ. ಇಲ್ಲಿಕೂಟೂ ಹೊಳೆಯಿಂದ ನೀರು ಪಂಪ್ ಮಾಡುವ 300 ಹೆಚ್ ಪಿಯ 2 ಮೋಟಾರ್ ಇದೀಗ ದುಸ್ಥಿಗೆ ಒಳಗಾಗಿದೆ. ಇದರಿಂದ ಮಡಿಕೇರಿ ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಈ ಸಮಸ್ಯೆ ಸರಿದೂಗಿಸಲು ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ಮಡಿಕೇರಿಯ ಕೆಲವೊಂದು ಗುಡ್ಡಗಾಡು ಪ್ರದೇಶಗಳಿಗೂ ಸೂಕ್ತ ರೀತಿಯಲ್ಲಿ ನೀರಿನ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಇಲ್ಲಿಯವರೆಗೆ ನೀರು ಪಂಪ್ ಮಾಡುವ ಮೋಟಾರನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ದಿರೋದೆ ಸಮಸ್ಯೆ ಉದ್ಭವವಾಗಲು ಕಾರಣ. ಅಧಿಕಾರಿಗಳ ನಿರ್ಲಕ್ಷ್ಯವೋ ಇಲ್ಲ, ಜನಪ್ರತಿನಿಧಿಗಳ ನಿರ್ಲಕ್ಷ್ಯವೊ ಗೊತ್ತಿಲ್ಲ ಇಂದು ಕೂಟುಹೊಳೆಗೆ ವಿಸಿಟ್ ಮಾಡಿದ್ದೇನೆ. 6 ಗಂಟೆಯ ಗಡುವನ್ನ ಅಧಿಕಾರಿಗಳಿಗೆ ನೀಡಿದ್ದು, ಅಷ್ಟರ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳೋದಾಗಿ ಮಂತರ್ ಗೌಡ ಎಚ್ಚರಿಕೆ ನೀಡಿದರು.