ಮಡಿಕೇರಿ ಜೂ.13 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದಿಂದ ಸನ್ಮಾನಿಸಿಸಲಾಯಿತು.
ವಿರಾಜಪೇಟೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲೆಯ ಹಿಂದೂ ಮಲಯಾಳಿ ಸಮಾಜ ಬಾಂಧವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಎ.ಎಸ್ ಪೊನ್ನಣ್ಣ ಭರವಸೆ ನೀಡಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ ವಿಜಯ, ಪ್ರಧಾನ ಕಾರ್ಯದರ್ಶಿ ಪಿ.ಕೆ ಶಶಿಕುಮಾರ್, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಸಲಹೆಗಾರ, ಟಿ.ಆರ್.ವಾಸುದೇವ್, ಟಿ.ಕೆ ಸುಧೀರ್, ಜಿ.ಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ವಿರಾಜಪೇಟೆ ಮಲಯಾಳಿ ಸಮಾಜದ ಅಧ್ಯಕ್ಷ ವಿನೂಪ್, ಕೆ.ಬಾಬು,ಪಿ.ಡಿ ಪ್ರಕಾಶ್, ಕೆ.ವಿ ಸುಬ್ರಮಣಿ, ಶರಂತ್ ಕಾಂತ್,ಎನ್.ಕೆ ಅಜೀಶ್ ಕುಮಾರ್, ಶಾಜು, ದಿನೇಶ್, ಉಣ್ಣಿ, ರಾಜೇಶ್, ಸುಮೇಶ್, ಸದಾನಂದ, ಅಶೋಕ್ ಕುಮಾರ್, ನಂದಾ ಹಾಗೂ ವಿವಿಧ ಭಾಗಗಳ ಹಿಂದೂ ಮಲಯಾಳಿ ಸಮಾಜದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.