ಮಡಿಕೇರಿ ಜೂ.13 : ತಲಕಾವೇರಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈಬಿಟ್ಟು ತೀರ್ಥಕ್ಷೇತ್ರವಾಗಿ ಘೋಷಿಸಲು ಕೊಡವಾಮೆರ ಕೊಂಡಾಟ ಸಂಘಟನೆ ಒತ್ತಾಯಿಸಿದೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಪೆÇನ್ನಣ್ಣ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು, ಕೊಡವರ ಕುಲದೇವಿ, ಕೊಡಗಿನ ಬಹುಪಾಲು ಜನರ ಆರಾಧ್ಯ ಮಾತೆ, ದಕ್ಷಿಣ ಕರ್ನಾಟಕದ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರಪಟ್ಟಿಯಿಂದ ಕೈ ಬಿಟ್ಟು ಪುಣ್ಯ ತೀರ್ಥಕ್ಷೇತ್ರವೆಂದು ಮುಂಗಡ ಪತ್ರದಲ್ಲಿ ಘೋಷಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಸಂಗಮ ಕ್ಷೇತ್ರ ಭಾಗಮಂಡಲವನ್ನು ದೇವಳ ನಗರ (ಟೆಂಪಲ್ ಟೌನ್)ಎಂದು ಸರ್ಕಾರ ಮುಂದಿನ ಮುಂಗಡಪತ್ರದಲ್ಲಿ ಘೋಷಿಸುವುದಲ್ಲದೆ ಪಾರಂಪರಿಕ ಧಾರ್ಮಿಕ ಕ್ಷೇತ್ರವಾಗಿ ಮೂಲತನಕ್ಕೆ ಮತ್ತು ಸ್ಥಳೀಯರ ಬದುಕಿಗೆ ಧಕ್ಕೆ ಬಾರದಂತೆ ವಿಶೇಷ ಅಭಿವೃದ್ಧಿಯ ಪ್ಯಾಕೇಜ್ ಘೋಷಿಸುವಂತೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ರಚಿಸದೆ ಇರುವ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿಯನ್ನು ಒಳಗೊಂಡಂತೆ ಆದಷ್ಟು ಬೇಗ ರಚಿಸಲು ಸರ್ಕಾರ ಮುಂದಾಗಬೇಕೆಂದು ಸಂಘಟನೆಯ ಪ್ರಮುಖರು ಮನವಿ ಮಾಡಿದರು.
Breaking News
- *ತೋಳೂರುಶೆಟ್ಟಳ್ಳಿ : ಡಾ. ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ*
- *ಸೋಮವಾರಪೇಟೆ ಗ್ಯಾರೆಂಟಿ ಯೋಜನೆಯ ಮಾಸಿಕ ಸಭೆ*
- *ಬೆಳೆ ಸಮೀಕ್ಷೆ ಕಾರ್ಯ : ಆಕ್ಷೇಪಣೆ ಸಲ್ಲಿಸಲು ನ.30 ಕೊನೆ ದಿನ*
- *ಕೆ.ಎಂ.ಎ. ವತಿಯಿಂದ ಸಂವಿಧಾನ ದಿನಾಚರಣೆ : ಜನರ ಹಕ್ಕುಗಳಿಗೆ ಸಂವಿಧಾನವೇ ಮೂಲ : ಸೂಫಿ ಹಾಜಿ*
- *ಕೊಡಗಿನ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ : ಅಧಿಕಾರಿಗಳಿಗೆ 2 ತಿಂಗಳ ಗಡುವು*
- *ಸಿಎನ್ಸಿಯಿಂದ “ಕೊಡವ ನ್ಯಾಷನಲ್ ಡೇ” ಮತ್ತು ಸಂವಿಧಾನ ದಿನಾಚರಣೆ : 9 ಪ್ರಮುಖ ನಿರ್ಣಯಗಳ ಮಂಡನೆ*
- *ಮಡಿಕೇರಿ : ನ.27 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಸಿವಿಲ್ ನ್ಯಾಯಾಧೀಶೆ ಶುಭ*
- *ವಿರಾಜಪೇಟೆಯಲ್ಲಿ ನ.27 ರಂದು ಕಾವೇರಿ ಕಾರ್ನಿವಾಲ್ ಫೆಸ್ಟ್*
- *ಚೆಟ್ಟಳ್ಳಿ ಗ್ರಾ.ಪಂ ಉಪಚುನಾವಣೆ : ಅಯ್ಯಂಡ್ರ ಭಾಗೀರಥಿ ಗೆಲುವು*