ಸುಂಟಿಕೊಪ್ಪ,ಜೂ.14 : ಮಾದಾಪುರ ರಾಜ್ಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಖಾಸಗಿ ಬಸ್ಸು ಹಾಗೂ ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾಗಿದ್ದು, ಟ್ರ್ಯಾಕ್ಟರ್ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಮಾದಾಪುರದಿಂದ ಶನಿವಾರಸಂತೆಗೆ ತೆರಳುತ್ತಿದ್ದ ವೆಂಕಟೇಶ್ವರ ಬಸ್ಸಿಗೆ ಸುಂಟಿಕೊಪ್ಪದಿಂದ ಮಾದಾಪುರ ಕಡೆ ತೆರಳುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿದ್ದು, ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅರ್ಧ ಗಂಟೆಗಳ ಕಾಲ ಮಡಿಕೇರಿ ಸೋಮವಾರಪೇಟೆ ಭಾಗದಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.









