ಮಡಿಕೇರಿ ಜೂ.19 : ಕಾರು ಅವಘಡದಲ್ಲಿ ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಯುವಕ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಾಡಗರಕೇರಿ ಗ್ರಾಮದ ಕುಪ್ಪುಡೀರ ಪೊನ್ನು ಮುತ್ತಪ್ಪ ಎಂಬವರ ಮಗ ಪ್ರಖ್ಯಾತ್ ಚಿಣ್ಣಪ್ಪ (21) ಸಾವನ್ನಪ್ಪಿದ ದುರ್ದೈವಿ.
ಇಂದು ಮುಂಜಾನೆಯ ನಸುಗತ್ತಲಿನಲ್ಲಿ ನಡೆದ ಅವಘಡದಲ್ಲಿ ಪ್ರಖ್ಯಾತ್ ಚಿಣ್ಣಪ್ಪ ಅವರಿದ್ದ ಕಾರು, ರಸ್ತೆ ಬದಿಯಲ್ಲಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.









