ಮಡಿಕೇರಿ ಜೂ.21 : ನಗರದ ಮಲ್ಲಿಕಾರ್ಜುನ ನಗರದಲ್ಲಿ ಇತ್ತೀಚಿಗೆ ಪುನರ್ ಪ್ರತಿಷ್ಠಾಪನಗೊಂಡ ಕೋದಂಡರಾಮ ದೇವಾಲಯದಲ್ಲಿ ದೃಢಕಲಶ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪುನರ್‍ಪ್ರತಿಷ್ಟೆ ಬಳಿಕ 48 ದಿನಗಳು ಕಳೆದು ನಡೆಯುವ ದೃಢಕಲಶ ಪೂಜೆಯಲ್ಲಿ ಹೋಮ-ಹವನದೊಂದಿಗೆ ಬೆಳಿಗ್ಗೆ 8 ಗಂಟೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ನೆರವೇರಿವು.
ವೈದಿಕರುಗಳಾದ ಕೃಷ್ಣ ಉಪಾಧ್ಯ, ಶ್ರೀನಿವಾಸ ಉಪಾಧ್ಯ, ಅರ್ಚಕರುಗಳಾದ ಷಣ್ಮುಖ, ಸುಬ್ರಮಣ್ಯ ಶಾಸ್ತ್ರೀ ಹಾಗೂ ಕೋದಂಡರಾಮ ದೇವಾಲಯದ ಅರ್ಚಕ ಚಂದ್ರಕಾಂತ್ ಭಟ್ ಹಾಗೂ ಇತರ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತಾಧಿಗಳಿಂದ ವಿಷ್ಣು ಸಹಸ್ರನಾಮ ನಡೆಯಿತು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಜರುಗಿತು.










