ಮಡಿಕೇರಿ ಜೂ.21 : “ಅನುಬಂಧ ಸ್ನೇಹ ಸಂಬಂಧಗಳ ದರ್ಶನ” ಶೀರ್ಷಿಕೆಯಡಿಯಲ್ಲಿ ಬೀರೂರಿನಲ್ಲಿ ಜರುಗಿದ ಜೆಸಿಐ ವಲಯ 14 ರ ಅರ್ಧವಾರ್ಷಿಕ ಸಮ್ಮೇಳನ-2023 ರಲ್ಲಿ ಕಳೆದ ಆರು ತಿಂಗಳಲ್ಲಿ ವಲಯ ಮತ್ತು ಜೆಸಿಐ ಭಾರತ ನೀಡುವ ಮಾರ್ಗದರ್ಶನದಂತೆ ಘಟಕಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು, ಅದರಲ್ಲಿ ಸಾಧನೆಗೈದ ಘಟಕವನ್ನು ಗುರುತಿಸಿ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೆಸಿಐ ಸೋಮವಾರಪೇಟೆ ಪುಷ್ಪಗಿರಿಯ ಅಧ್ಯಕ್ಷೆ ಎಂ.ಎ.ರುಬೀನಾ ಗೆ ವಲಯ ಅಧ್ಯಕ್ಷರಾದ ಯಶಸ್ವಿನಿ, ವಲಯ ಉಪಾಧ್ಯಕ್ಷ ಹೆಚ್.ಆರ್.ಪ್ರಶಾಂತ್ ಗೋಲ್ಡನ್ ಕಾಲರ್ ಹಾಕುವ ಮೂಲಕ ಗೋಲ್ಡನ್ ಕಾಲರ್ ಪ್ರಸಿಡೆಂಟ್ ಅವಾರ್ಡ್ ನೀಡಿ ಗೌರವಿಸಿದರು.
ಜೊತೆಗೆ ಔಟ್ ಸ್ಟ್ಯಾಂಡಿಂಗ್ ಲಾಮ್ ವಿನ್ನರ್, ಔಟ್ ಸ್ಟ್ಯಾಂಡಿಂಗ್ ಫರ್ ಮಾರ್ಮರ್ ಪಿ ಆರ್ ಅಂಡ್ ಮಾರ್ಕೆಟಿಂಗ್, ನೀಡ್ ಬ್ಲಡ್ ಕಾಲ್ ಜೆಸಿಐ ನಲ್ಲಿ ವಿನ್ನರ್, ಗೋ ಗ್ರೀನ್, ಮ್ಯಾನೇಜ್ ಮೆಂಟ್ ಏರಿಯ, ಪ್ರೋಗ್ರಾಂ ಏರಿಯ ಮತ್ತು ಗೋ ಗ್ರೀನ್ ನಲ್ಲಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಗಳನ್ನು ಘಟಕಕ್ಕೆ ಲಭಿಸಿದೆ.
ಪುಷ್ಪಗಿರಿ ಘಟಕದಿಂದ ಜೆಸಿ ಮಮತ, ಕೆ.ಎ.ಪ್ರಕಾಶ್ , ಮಾಯಾಗಿರೀಶ್, ಕಾರ್ಯದರ್ಶಿ ಜಗದಾಂಭ, ಜಿತೇಶ್, ದಿಶಾ ಭಾಗವಹಿಸಿದ್ದರು.









