ಮಡಿಕೇರಿ ಜೂ.23 : ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹಾಗೂ ಹಾವೇರಿ ಹಾಲ್ ನ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ವಯೋವೃದ್ಧರನ್ನು ಕೊಡಗು ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಶಕ್ತಿ ಆಶ್ರಮಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಾರ್ವಜನಿಕ ಕೋರಿಕೆಯ ಮೇರೆಗೆ ಹಿತರಕ್ಷಣಾ ವೇದಿಕೆಯ ಸದಸ್ಯರಾದ ಆಕಾಶ್ ಹಾಗೂ ಕಿರಣ್ ವೇದಿಕೆಯ ಅಧ್ಯಕ್ಷ ರವಿ ಗೌಡ ಅವರಿಗೆ ನೀಡಿದ ಮಾಹಿತಿಯ ಮೇರೆಗೆ ಮಡಿಕೇರಿ ನಗರದ ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್ ಅವರ ಗಮನಕ್ಕೆ ತಂದು ವಯೋವೃದ್ಧರನ್ನು ಶಕ್ತಿ ಆಶ್ರಮ ಕ್ಕೆ ಸೇರಿಸಲಾಯಿತು.
ಈ ಸಂದರ್ಭ ವೇದಿಕೆಯ ಅಧ್ಯಕ್ಷ ರವಿ ಗೌಡ, ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್, ಮಡಿಕೇರಿ ತಾಲೂಕು ಅಧ್ಯಕ್ಷ ನಾಗೇಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಕವಿತಾ ಪ್ರಸಾದ್, ನಿರ್ದೇಶಕರಾದ ಲಿಲ್ಲಿ, ನಗರ ಕಾರ್ಯದರ್ಶಿಗಳಾದ ಪೂರ್ಣಿಮಾ, ಸದಸ್ಯರುಗಳಾದ ಆಕಾಶ್, ಕಿರಣ್ ಹಾಗೂ ಶಕ್ತಿ ಆಶ್ರಮದ ಮೇಲ್ವಿಚಾರಕರಾದ ಹೆಚ್.ಆರ್. ಸತೀಶ್ ಹಾಜರಿದ್ದರು.