ಮಡಿಕೇರಿ ಜೂ.24 : ಕೊಡಗು ಜಿಲ್ಲಾಧಿಕಾರಿಯಾಗಿ ಕಾಯ೯ನಿವ೯ಹಿಸಿ ಇದೀಗ ವಗಾ೯ವಣೆಯಾಗಿರುವ ಡಾ.ಬಿ.ಸಿ.ಸತೀಶ್ ಅವರಿಗೆ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಘಟಕದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಈ ಸಂದಭ೯ ಮಾತನಾಡಿದ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಮಡಿಕೇರಿಯಲ್ಲಿ ಸುಸಜ್ಜಿತವಾದ ರೆಡ್ ಕ್ರಾಸ್ ಭವನ ನಿಮಾ೯ಣವಾಗುವಲ್ಲಿ ಜಿಲ್ಲಾಧಿಕಾರಿಯಾಗಿದ್ದ ಬಿ.ಸಿ.ಸತೀಶ್ ಅವರ ಕೊಡುಗೆ ಮಹತ್ವದ್ದಾಗಿತ್ತು. ಕಳೆದ ವಷ೯ ಮಳೆಗಾಲದಲ್ಲಿ ಕಾಳಜಿ ಕೇಂದ್ರವನ್ನು ರೆಡ್ ಕ್ರಾಸ್ ಸಭಾಭವನದಲ್ಲಿ ಪ್ರಾರಂಭಿಸಿ, ಅನೇಕ ಸಂಸ್ತಸ್ಥರಿಗೆ ನೆರವು ನೀಡುವಲ್ಲಿಯೂ ಸತೀಶ್ ಅವರು ಕಾಳಜಿ ತೋರಿದ್ದರು ಎಂದು ಹೆಮ್ಮೆಯಿಂದ ಸ್ನರಿಸಿದರು.
ಕೊಡಗು ಜಿಲ್ಲೆಯಲ್ಲಿ ಜನಾನುರಾಗಿ ಜಿಲ್ಲಾಧಿಕಾರಿಯಾಗಿ ಕಾಯ೯ನಿವ೯ಹಿಸಿದ ಡಾ.ಬಿ.ಸಿ.ಸತೀಶ್ ಅವರ ಕೊಡುಗೆ ಜಿಲ್ಲೆಯ ಜನತೆಯ ಮನದಲ್ಲಿ ಸದಾ ಉಳಿಯುವಂಥದ್ದು ಎಂದೂ ರವೀಂದ್ರ ರೈ ಹೇಳಿದರು.
ಈ ಸಂದಭ೯ ರೆಡ್ ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಅನಿಲ್ ಎಚ್.ಟಿ. ಪ್ರಧಾನ ಕಾಯ೯ದಶಿ೯ ಮುರಳೀಧರ್ ಹಾಜರಿದ್ದರು.