ಮಡಿಕೇರಿ ಜೂ.26 : ಕುಂಜಿಲದ ಕೆ ಪಿ ಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟಿಸಲಾಯಿತು.
ಸಮಾರಂಭದಲ್ಲಿ ಕುಂಜಿಲ-ಕಕ್ಕಬೆ ಗ್ರಾ.ಪಂ ಅಧ್ಯಕ್ಷ ಸಂಪನ್ ಅಯ್ಯಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ , ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹಾಜಿ ಹಾಗೂ ಶಾಲೆಯ ಎಸ್. ಡಿ ಎಂ. ಸಿ ಅಧ್ಯಕ್ಷರು ಹಾಗೂ ಗ್ರಾ.ಪಂ ಸದಸ್ಯರಾದ ಸಫಿ, ಗ್ರಾ.ಪಂ ಉಪಾಧ್ಯಕ್ಷ ರಸೀನಾ, ಗ್ರಾ.ಪಂ ಸದಸ್ಯ ಬಷೀರ್ , ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಫೀಲ್ , ಶಾಲಾ ಮುಖ್ಯೋಪಾಧ್ಯಾಯರಾದ ಪಿ. ಕೆ ಗಂಗಮ್ಮ, ಶಿಕ್ಷಕರು, ಪೋಷಕರು, ಶಾಲಾ ಎಸ್. ಡಿ ಎಂ ಸಿ ಸದಸ್ಯರು ಹಾಜರಿದ್ದರು.