ಮಡಿಕೇರಿ ಜೂ.26 : ಎಸ್‌ಕೆಎಸ್‌ಎಸ್‌ಎಫ್ ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸ್ಥಾಪನಾ ದಿನ ಆಚರಣೆ ನಡೆಯಿತು.
ಖತೀಬರಾದ ರಿಯಾಝ್ ಫೈಝಿ ಮಾತನಾಡಿ, ಸಮಸ್ತದ 97 ವರ್ಷಗಳ ಕಾಲ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಉಮ್ಮರ್ ಧ್ವಜಾರೋಹಣ ನೆರವೇರಿಸಿದರು. ಎಸ್‍ಕೆಎಸ್‍ಎಸ್‍ಎಫ್ ಶಾಖೆ ಅಧ್ಯಕ್ಷ ಸಾಜಿದ್ ಅಝ್ಹರಿ ಅಧ್ಯಕ್ಷತೆ ವಹಿಸಿದರು.
ಜಮಾಅತ್ ಉಪಾಧ್ಯಕ್ಷ ಟಿ.ಬಿ.ಹನೀಫ್, ಅಲ್ತಾಪ್ ಗೂನಡ್ಕ ಶಂಸುದ್ದೀನ್ ಡ್ರೈವರ್ ಮಿದ್ಲಾಝ್ ದಾರಿಮಿ, ಅಬ್ಬಾಸ್ ಮುಸ್ಲಿಯಾರ್ ಉಸ್ಮಾನ್ ಪಾಂಡಿ ಸಾದುಮಾನ್ ತೆಕ್ಕಿಲ್ ಉಸ್ಮಾನ್ ಗಡಿಕಲ್ಲು ಹಾಗೂ ಜಮಾಅತರು ಮದ್ರಸ ವಿದ್ಯಾರ್ಥಿಗಳು ಹಾಜರಿದ್ದರು.
ಶಾಖೆಯ ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಸ್ವಾಗತಿಸಿ, ಸಾದುಮಾನ್ ತೆಕ್ಕಿಲ್ ವಂದಿಸಿದರು.