ಸುಂಟಿಕೊಪ್ಪ, ಜೂ.26 : ಸುಂಟಿಕೊಪ್ಪ ಪಟ್ಟಣದಲ್ಲಿ ಸಂತೆ ದಿನವಾದ ಭಾನುವಾರ ಜನಜಂಗುಳಿ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಿಂದಲೂ ಸಂತೆ ಮಾರುಕಟ್ಟೆಗೆ ಗ್ರಾಹಕರು ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿ ರಸ್ತೆ ಬದಿ ದಿಢೀರನೆ ಗೂಡ್ಸ್ ಗಾಡಿಗಳಲ್ಲಿ ಚಪ್ಪಲಿ ಹಣ್ಣು ಹಂಪಲು ಅಂಗಡಿಗಳು, ಸೇರಿದಂತೆ ಇತರೆ ಸಾಮಾಗ್ರಿಗಳ ಅಂಗಡಿಗಳು ತಲೆ ಎತ್ತಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.
ಶನಿವಾರ ಹಾಗೂ ಭಾನುವಾರ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಈ ರಸ್ತೆಗಾಗಿ ಸಂಚರಿಸುತ್ತಿದ್ದು, ರಸ್ತೆ ಬದಿ ಅಂಗಡಿಗಳು ತೆರೆದು ಮಾರಾಟಗೊಳಿಸುವುದರಿಂದ ಕೆಲ ಖಾಸಗಿ ವಾಹನ ನಿಲುಗಡೆಗೊಳಿಸುವುದು ಟ್ರಾಫಿಕ್ ಜಾಮ್ ಆಗುತ್ತಿದ್ದು, ಅನಾಹುತ ಹಾಗೂ ಪಾದಚಾರಿಗಳ ಜೀವಕ್ಕೆ ಕಂಟಕಕ್ಕೆ ಆಹ್ವಾನ ನೀಡಿದಂತ್ತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.









