ಮಡಿಕೇರಿ ಜೂ.27 : ಕೊಡಗುಜಿಲ್ಲಾ ಬಂಟರ ಸಂಘದ ವತಿಯಿಂದ 2022-23ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2022-23ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ, ಬಂಟ ಸಮುದಾಯಕ್ಕ ಸೇರಿದ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ಪ್ರತಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಅರ್ಜಿ ಸಲ್ಲಿಸಲು ಜು.5 ಕೊನೆಯ ದಿನವಾಗಿದೆ. ನಂತರದಲ್ಲಿ ಬರುವ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಜಿಲ್ಲಾಧ್ಯಕ್ಷ ಬಿ.ಡಿ.ಜಗದೀಶ್‍ರೈ, ಕಾರ್ಯದರ್ಶಿ ರವೀಂದ್ರ ವಿ. ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ತಲುಪಿಸಬೇಕಾದ ಕಚೇರಿ ವಿಳಾಸ : ಅಧ್ಯಕ್ಷರು, ಕೊಡಗುಜಿಲ್ಲಾ ಬಂಟರ ಸಂಘ, 25/4, ಗಾಂಧಿ ಮೈದಾನ ಬಳಿ, ಮಡಿಕೇರಿ- 571201. ಮೊ.7204520272. ಹೆಚ್ಚಿನ ಮಾಹಿತಿಗೆ 9880869490 ಮನೋಜ್ ಶೆಟ್ಟಿ, 7204520272 ಕಿಶೋರ್ ರೈ ಕತ್ತಲೆಕಾಡು ಇವರನ್ನು ಸಂಪರ್ಕಿಸಬಹುದು. ನಿಗದಿತ ಸಮಯದೊಳಗೆ ಬಂದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದೆಂದು ಅವರು ತಿಳಿಸಿದ್ದಾರೆ.










