ಮಡಿಕೇರಿ ಜೂ.26 : ರಾಷ್ಟ್ರೀಯ ಸಂಯೋಜಿತ ವೈದ್ಯ ಪದ್ದತಿಗಳ ಸಂಘಟನೆಯ ಕೊಡಗು ಶಾಖೆಯ ವತಿಯಿಂದ ಕೊಡಗು ಸಂಘದ ವೈದ್ಯರಿಗೆ ಮಡಿಕೇರಿಯಲ್ಲಿ ನಿರಂತರ ಶಿಕ್ಷಣ ನಡೆಯಿತು.
ಸುಳ್ಯದ ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಹಿರಿಯ ಪ್ರಾಧ್ಯಾಪಕಿ ಡಾ.ರೋಹಿಣಿ ಭಾರದ್ವಾಜ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಆಯುರ್ವೇದದಲ್ಲಿ ಶೀಘ್ರವಾಗಿ ಕೆಲಸ ಮಾಡುವ ಮದ್ದುಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದರು.
ಹೊಸದಾಗಿ ಮಾರುಕಟ್ಟೆಗೆ ಬಂದಿರುವ ವಿಶೇಷ ಆಯುರ್ವೇದ ಮದ್ದಿನ ಬಗ್ಗೆ ಡಾ.ಉದಯ ಕುಮಾರ್.ಎಸ್.ಮಾಹಿತಿ ನೀಡಿದರು. NIMA ಕೊಡಗು ಅಧ್ಯಕ್ಷ ಡಾ.ರಾಜಾರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಕೊಡಗಿನ ಆಯುಷ್ ವೈದ್ಯರು ನಿರಂತರ ಶಿಕ್ಷಣದ ಪ್ರಯೋಜನ ಪಡೆದುಕೊಂಡರು.
ಡಾ.ರೋಶನ್ ಸ್ವಾಗತಿಸಿ,,ಡಾ.ಅನುಷಾ ವಂದಿಸಿದರು. ಸಂಪನ್ಮೂಲ ವ್ಯಕ್ತಿ ಪರಿಚಯ ಡಾ.ಹೀನಾ ಕೌಸರ್ ನೆರವೇರಿಸಿ, ಡಾ.ಸೌಮ್ಯ ಗಣರಾಜ್ ನಿರೂಪಿಸಿದರು.
NIMA ಮಹಿಳಾ ಘಟಕದ ಅಧ್ಯಕ್ಷೆ ಡಾ.ಶೈಲಜಾ ರಾಜೇಂದ್ರ, ಹಿರಿಯ ವೈದ್ಯರುಗಳಾದ ಡಾ.ಉದಯ ಶಂಕರ.ಎನ್.,ಡಾ.ಶೈಲಜಾ ಮುರಳೀಧರ,ಡಾ.ರಾಜೇಂದ್ರ ಇತರರು ಉಪಸ್ಥಿತರಿದ್ದರು. ಸಂಘದ ಸದಸ್ಯರಲ್ಲಿ ಅದೃಷ್ಟದ ವೈದ್ಯರಾಗಿ ಡಾ.ಪದ್ಮನಾಭ, ಅದೃಷ್ಟದ ಕ್ಲಿನಿಕ್ಗಾಗಿ ಡಾ.ರಾಜೇಶ್ವರಿ,ವೈದ್ಯೋತ್ತಮರಾಗಿ ಡಾ.ಶ್ಯಾಮ.ಕೆ ಅವರನ್ನು ಗುರುತಿಸಲಾಯಿತು.