ವಿರಾಜಪೇಟೆ ಜೂ.26 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ಜಿ.ಲಿನ್ನಿ ಪ್ರಾಣಾಯಾಮ ಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ವಭಾವಿ ತರಬೇತಿ ನೀಡಿದರು.
ಮುಖ್ಯ ಶಿಕ್ಷಕಿ ಅರುಣ ಆನ್ಸಿ ಡಿಸೋಜ ಯೋಗದ ಮಹತ್ವದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ಮನೆಯ ಸದಸ್ಯರಿಗೂ ಕಲಿಸಬೇಕು. ಆರೋಗ್ಯಕ್ಕೆ ಯೋಗ ಉತ್ತಮ ಸಾಧನ. ಇಡೀ ವಿಶ್ವವೇ ಇಂದು ಯೋಗದ ಬಗ್ಗೆ ತಿಳಿದುಕೊಂಡು ಯೋಗದ ಅಭ್ಯಾಸ ಮಾಡುತ್ತಿದೆ. ಇತ್ಯಾದಿ ಅಂಶಗಳ ಬಗ್ಗೆ ತಿಳಿಸಿದರು.
ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದೊಂದಿಗೆ ಯೋಗವನ್ನು ಮಾಡಲಾಯಿತು. ಶಿಕ್ಷಕರಾದ ಲೀಲಾವತಿ, ಪವಿತ್ರ, ಕಿರಣ್ ಕುಮಾರ್, ಅಲ್ಲಾಬಕ್ಷ ಬಡೇಘರ್, ಹಾಗೂ ಸಾವಿತ್ರಿ ಸೇರಿದಂತೆ ಎಲ್ಲಾ ಶಿಕ್ಷಕರೂ ಯೋಗ ಮಾಡಿದರು.









