ಮಡಿಕೇರಿ ಜೂ.26 : ಶ್ರೀ ಶಕ್ತಿ ಅಶೋಸಿಯೆಷನ್, ಶಕ್ತಿ ಧಾಮ ಹಾಸ್ಪಿಟಲ್ ಹಾಗೂ ಸಮಾಜ ಸೇವಾ ವಿಭಾಗ ಜ್ಞಾನ ಕಾವೇರಿ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯ ಇವರ ಸಹಯೋಗದೊಂದಿಗೆ “ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ’’ ಕಾರ್ಯಕ್ರಮವು ಜೂನ್ 27 ರಂದು ಬೆಳಗ್ಗೆ 10.30 ಗಂಟೆಗೆ ಶಕ್ತಿ ಧಾಮ ಹಾಸ್ಪಿಟಲ್ ಕುಶಾಲನಗರದಲ್ಲಿ ನಡೆಯಲಿದೆ.
ಶಕ್ತಿಧಾಮ ಐಆರ್‍ಸಿಎ ಆರೋಗ್ಯ ಆಧಿಕಾರಿ ಡಾ.ಭರತ್, ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕರಾದ ಆರ್.ವಿ ಗಂಗಾಧರಪ್ಪ, ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಚಿಕ್ಕಳುವಾರ ಸಮಾಜ ಸೇವಾ ವಿಭಾಗದ ಅಧ್ಯಾಪಕರಾದ ಕೆ.ಹರಿಣಾಕ್ಷಿ, ಕುಶಾಲನಗರದ ಪ್ರಜಾಪೀಠ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಬ್ರಹ್ಮಕುಮಾರಿ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.










