ಮಡಿಕೇರಿ ಜೂ.28 : ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಮಾಡುವ 2023ನೇ ಸಾಲಿನ ಕೊಡಗು ಸೇವಾ ರತ್ನ ಪ್ರಶಸ್ತಿಗೆ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷ ವಿನು ಮತ್ತು ಬನವಾಸಿ ಕನ್ನಡಿಗ ಬಳಗದ ಜೈ ಕಿರಣ್, ಕಿರಣ್ಮಯಿ ಶರ್ಮ ಮತ್ತು ಶಮಂತ್ ಹೊಸಹೊಳಲು ಆಯ್ಕೆಯಾಗಿದ್ದಾರೆ.
ಮಡಿಕೇರಿಯ ನಗರದ ರಾಜ್ದರ್ಶನ್ ಹೊಟೇಲ್ ಸಭಾಂಗಣದಲ್ಲಿ ನಡೆದ ನಮ್ಮ ಕೊಡಗು ಟ್ರಸ್ಟ್ ನ 5ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಮ್ಮ ಕೊಡಗು ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ನೌಶಾದ್ ಜನ್ನತ್ತ್ ಮಾತನಾಡಿ, ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ ನಂತರ ಸಂತ್ರಸ್ತರು, ಆದಿವಾಸಿಗಳು, ಸರಕಾರಿ ಶಾಲೆ, ರಕ್ತ ಪೂರೈಕೆ ಮುಂತಾದ ಸಮಾಜ ಸೇವೆಯನ್ನು ಮಾಡುತ್ತಿರುವವರನ್ನು ಗುರುತಿಸಿ ಕೊಡಗು ಸೇವಾ ರತ್ನ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ಬಾರಿ ನಾಲ್ವರಿಗೆ ನೀಡಲಾಗಿದೆ ಎಂದು ತಿಳಿಸಿದರು.