ಸೋಮವಾರಪೇಟೆ ಜೂ.29 : ಬಕ್ರೀದ್ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.
ಸಮೀಪದ ಕಲ್ಕಂದೂರು ಜುಮಾ ಮಸೀದಿಯಲ್ಲಿ ಖತೀಬರಾದ ಹಸೈನಾರ್ ಮದನಿ ಉಸ್ತಾದ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಖಬರಸ್ಥಾನದಲ್ಲಿ ಝಿಯಾರತ್ ಪ್ರಾರ್ಥನೆ ನೆರವೇರಿತು. ಹೊಸತೋಟ ಜಾಮಿಯಾ ಮಸೀದಿಯಲ್ಲಿ, ಬಜೆಗುಂಡಿ ಖಿಳಾರಿಯಾ ಮಸೀದಿ, ಪಟ್ಟಣದ ಜಲಾಲಿಯಾ ಮಸೀದಿಗಳಲ್ಲಿ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನಡೆದವು.










