
ಮಡಿಕೇರಿ NEWS DESK ಜೂ.27 : ಕುಶಾಲನಗರದ ಪ್ರವಾಸಿತಾಣ ನಿಸರ್ಗಧಾಮ ಸಮೀಪದ ಮಳಿಗೆಯೊಂದರಲ್ಲಿ ನಡೆದಿರುವ ಮತಾಂತರ ಪ್ರಕರಣಕ್ಕೆ ಸಂಬoಧಿಸಿದoತೆ, ಕೇಂದ್ರೀಯ ತನಿಖಾ ದಳದ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಿ ಈ ಕೃತ್ಯದ ಮೂಲವನ್ನು ಬಯಲಿಗೆಳೆಯಬೇಕೆಂದು ಕುಶಾಲನಗರ ಹಿಂದೂ ಸುರಕ್ಷಾ ಸಮಿತಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಸುರಕ್ಷಾ ಸಮಿತಿಯ ಕುಶಾಲನಗರದ ಸಂಚಾಲಕ ಬಿ.ಅಮೃತರಾಜ್ ಅವರು, ನಿಸರ್ಗಧಾಮದ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆೆ ಹಾಗೂ ಆಕೆಯ ಮಗನನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿ ಗ್ರಾಮದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಹೊರ ರಾಜ್ಯದಲ್ಲಿ ಘಟನೆ ನಡೆದಿರುವ ಹಿನ್ನೆಲೆ, ಇಲ್ಲಿನ ಪೊಲೀಸ್ ಇಲಾಖೆ ಎನ್‌ಐಎ ಸಹಕಾರದೊಂದಿಗೆ ಕೇರಳದಲ್ಲಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಸ್ತುತ ಬೆಳಕಿಗೆ ಬಂದಿರುವ ಮತಾಂತರ ಪ್ರಕರಣದ ಮಾದರಿಯಲ್ಲೆ ನಿಸರ್ಗಧಾಮ ವ್ಯಾಪ್ತಿಯಲ್ಲಿ ಐದಾರು ಪ್ರಕರಣಗಳು ನಡೆದಿರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಿಸರ್ಗಧಾಮದ ಸಮೀಪದಲ್ಲೇ ಇರುವ ರೆಸಾರ್ಟ್ ವೊಂದರಲ್ಲಿ ಅನುಮಾನಾಸ್ಪದವಾದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂಬoಧಪಟ್ಟ ರೆಸಾರ್ಟ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. *ಬಂದ್* ಹಿoದೂ ಧರ್ಮೀಯರನ್ನು ಮತಾಂತರ ಮಾಡುವ ಪ್ರಕರಣಗಳ ವಿರುದ್ಧ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂ.30 ರಂದು ಕುಶಾಲನನಗರದಲ್ಲಿ ಬೆಳಿಗ್ಗೆ 6 ಗಂಟೆಯಿoದ ಮಧ್ಯಾಹ್ನ 1.30 ಗಂಟೆಯವರೆಗೆ ಸ್ವಯಂ ಪ್ರೇರಿತ ಬಂದ್ ನಡೆಯಲಿದೆ. ಇದೇ ಸಂದರ್ಭ ಬೆಳಗ್ಗೆ 10.30 ಗಂಟೆಗೆ ನಿಸರ್ಗಧಾಮದಿಂದ ಜನಾಂದೋಲನ ಜಾಗೃತಿ ಜಾಥ ಆರಂಭಗೊoಡು ಕುಶಾಲನಗರದ ಗಣಪತಿ ದೇವಸ್ಥಾನದವರೆಗೆ ಸಾಗಲಿದೆ. ಬಳಿಕ ಕಾರು ನಿಲ್ದಾಣದಲ್ಲಿ ಸಮಾವೇಶ ನಡೆಯಲಿದೆ ಎಂದು ಬಿ.ಅಮೃತರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಸುರಕ್ಷಾ ಸಮಿತಿಯ ಸಹ ಸಂಚಾಲಕರುಗಳಾದ ಗಣಿ ಪ್ರಸಾದ್, ವಸಂತ್ ರೈ, ಚಂದ್ರಶೇಖರ ಹೇರೂರ, ಪ್ರಶಾಂತ್ ವಿ.ಹೆಚ್ ಹಾಗೂ ಜ್ಯೋತಿ ಕುದುಪಜೆ ಉಪಸ್ಥಿತರಿದ್ದರು.








