ಮಡಿಕೇರಿ ಜು.4 : ಚೆಂಬು ಗ್ರಾಮದ ಊರುಬೈಲು-ಮಾರ್ಪಡ್ಕ ಭಾಗದಲ್ಲಿ ಪ್ರಸ್ತುತ ಇರುವ ಸಂಪರ್ಕ ಸೇತುವೆಯ ಎದುರು ಬದಿ, ಶಿಥಿಲಗೊಂಡ ಹಳೆ ಸೇತುವೆ ಇದ್ದು, ಇದರಿಂದಾಗಿ ಮಳೆಗಾಲದಲ್ಲಿ ಸುಲಲಿತ ನೀರಿನ ಹರಿವಿಗೆ ತೊಂದರೆ ಉಂಟಾಗಿದ್ದು ಪ್ರವಾಹ ಭೀತಿ ಮಾತ್ರವಲ್ಲದೇ ಪ್ರಸ್ತುತ ಇರುವ ಸೇತುವೆಗೆ ಅಪಾಯ ಮತ್ತು ಅಕ್ಕಪಕ್ಕದ ಆಸ್ತಿಗಳಿಗೆ ನೀರು ನುಗ್ಗಿ ಆಸ್ತಿ ಹಾನಿ ಆಗುವ ಆತಂಕವಿತ್ತು.
ಇದನ್ನು ಮನಗಂಡ ನೂತನ ಶಾಸಕ ಎ.ಎಸ್ ಪೊನ್ನಣ್ಣ ಸ್ಥಳೀಯ ನಿವಾಸಿಗಳ ಕೋರಿಕೆ ಮೇರೆಗೆ ಕೂಡಲೇ ಸ್ಪಂದಿಸಿ, ಜಿ.ಪಂ ಇಂಜಿನಿಯರ್ ಅವರಿಗೆ ಸೂಚನೆ ನೀಡಿದ ಮೇರೆಗೆ ಇದೀಗ ಹಳೆ ಸೇತುವೆಯ ತೆರುವಿನ ಕಾಮಗಾರಿ ಪೂರ್ಣವಾಗಿದೆ.
ಅತ್ಯಂತ ಕ್ಷೀಪ್ರ ಗತಿಯಲ್ಲಿ ಸಾರ್ವಜನಿಕರ ತೊಂದರೆಗೆ ಸ್ಪಂದಿಸಿದ ಪೊನ್ನಣ್ಣ ಅವರ ಕಾರ್ಯವೈಕರಿಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಇಸ್ಮಾಯಿಲ್ ಅವರಿಗೆ ಸ್ಥಳೀಯ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದರು.
ಕೂಡಲೇ ಸ್ಪಂದಿಸಿದ ಜಿ.ಪಂ ಕಾಮಗಾರಿ ತಂಡಕ್ಕೆ, ಸ್ಥಳೀಯರ ಸಮಸ್ಯೆಯನ್ನು ಶಾಸಕರಿಗೆ ತಲುಪಿಸುವಲ್ಲಿ ಮುತುವರ್ಜಿ ವಹಿಸಿದ ಸೂರಜ್ ಹೊಸೂರು, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಗ್ರಾ.ಪಂ ಅಧ್ಯಕ್ಷರಾದ ಕುಸುಮಾ ಯೋಗೇಶ್ವರ್ ಮತ್ತು ವಲಯ ಕಾಂಗ್ರೆಸ್ ತಂಡದವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದ ಸಲ್ಲಿಸಿದರು.








