ಮಡಿಕೇರಿ ಜು.5 : ಕರಿಕೆ ಪ್ರೌಢ ಶಾಲೆಯಲ್ಲಿ ಭಾಗಮಂಡಲ ವಲಯ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಶಾಲೆಯ ಆವರಣದಲ್ಲಿ ಅರಣ್ಯ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿಗಳು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಎಸ್.ಡಿ.ಎಂ.ಸಿ ಸಿಬ್ಬಂದಿಗಳು, ಪ್ರಮುಖರಾದ ಶಿವ, ಗಿರಿ, ರಾಜೇಶ್, ಸಚಿನ್ ಬಿರೇದಾರ್ ಪಾಲ್ಗೊಂಡು ವಿವಿಧ ತಳಿಯ ಸಸಿಗಳನ್ನು ನೆಟ್ಟರು.
ಈ ಸಂದರ್ಭ ಆರ್‍ಎಪ್‍ಓ ರಾವೀಂದ್ರ ಮಾತನಾಡಿ, ಸಸಿಗಳನ್ನು ನೆಡುವ ಜೊತೆ ಜೊತೆಗೆ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.