ಮಡಿಕೇರಿ ಜು.5 : ಹುಚ್ಚು ನಾಯಿ ಕಚ್ಚಿ ಬಾಲಕ ಸೇರಿದಂತೆ 9 ಮಂದಿಗೆ ಗಾಯವಾಗಿರುವ ಘಟನೆ ಪಿರಿಯಾಪಟ್ಟಣದ ಈಡಿಗರ ಬೀದಿಯ ಬಳಿ ನಡೆದಿದೆ.
10 ವರ್ಷದ ಬಾಲಕನ ಕಾಲು ಮತ್ತು ತೊಡೆ ಭಾಗಕ್ಕೆ ತೀವ್ರವಾಗಿ ಕಚ್ಚಿದ ಪರಿಣಾಮ ಗಂಭೀರ ಗಾಯಗಳಾಗಿವೆ. ಉಳಿದ 8 ಮಂದಿಯ ಮೇಲೂ ನಾಯಿ ದಾಳಿ ಮಾಡಿದ್ದು, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಿರಿಯಾಪಟ್ಟಣದ ವ್ಯಾಪ್ತಿಯಲ್ಲಿ ಹುಚ್ಚು ನಾಯಿ ಮತ್ತು ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.








