ಮಡಿಕೇರಿ ಜು.10 : ಮನೆಯ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಮಾಯಮುಡಿ ಗ್ರಾಮದ ದಾಸ ಕಾಲೋನಿ ನಿವಾಸಿ ಸುಜಯ್ (29)ಬಂಧಿತ ಆರೋಪಿ. ತನ್ನ ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು 49 ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವಿರಾಜಪೇಟೆ ಉಪ ವಿಭಾಗ ಡಿವೈಎಸ್‍ಪಿ ಆರ್.ಮೋಹನ್‍ಕುಮಾರ್, ಗೋಣಿಕೊಪ್ಪ ವೃತ್ತ ಸಿಪಿಐ ಗೋವಿಂದರಾಜು, ಪಿಎಸ್‍ಐ ಕೆ.ಪಿ.ದಿಕ್ಷೀತ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸರ ಕರ್ತವ್ಯ ನಿಷ್ಠೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.
Breaking News
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*
- *ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ*
- *ಕಾರಾಗೃಹ ವಾರ್ಡನ್ ಹುದ್ದೆಗೆ ಆಹ್ವಾನ*
- *ವೀರ ಸೇನಾನಿಗಳಿಗೆ ಅಗೌರವ : ಕುಲಾಲ ಕುಂಬಾರ ಸಂಘ ಖಂಡನೆ*
- *ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ*
- *ಆರೋಪಿಯ ಗಡಿಪಾರಿಗೆ ಹಿಂದು ಜಾಗರಣ ವೇದಿಕೆ ಒತ್ತಾಯ*
- *ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧಾ ಕಾರ್ಯಕ್ರಮ*
- *ಸೋಮವಾರಪೇಟೆ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ*