ಮಡಿಕೇರಿ ಜು.11 : ನಗರದ ಐಟಿಐ ಜಂಕ್ಷನ್ನಲ್ಲಿ ಧನಲಕ್ಷ್ಮಿ ಎಂಬವರಿಗೆ ಸೇರಿದ ಅಂಗಡಿ ಮಳಿಗೆಯ ಜಾಗಕ್ಕೆ ವಾರದ ಒಳಗಾಗಿ ಫಾರಂ ನಂ.3 ದಾಖಲೆಯನ್ನು ನಗರಸಭೆ ಒದಗಿಸಬೇಕು. ಇಲ್ಲವಾದಲ್ಲಿ ನೊಂದ ಮಹಿಳೆಗೆ ನ್ಯಾಯ ಒದಗಿಸಲು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಮಡಿಕೇರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಕೆ.ಎಂ.ಗಣೇಶ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧನಲಕ್ಷ್ಮಿ ಅವರಿಗೆ ಸೇರಿದ ಜಾಗದ ದಾಖಲೆ ಗೊಂದಲ ಮುಂದುವರೆದಿದೆ, ಈ ನಡುವೆ ಇತ್ತೀಚೆಗೆ ನಗರಸಭಾ ಸದಸ್ಯರೊಬ್ಬರ ಮೇಲೆ ಹಲ್ಲೆ ಕೂಡ ನಡೆದಿದ್ದು, ಇದನ್ನು ಖಂಡಿಸುತ್ತೇನೆ. ಕಂದಾಯ ಇಲಾಖೆ ಜಾಗಕ್ಕೆ 2017ರಲ್ಲೆ ಜಾಗಕ್ಕೆ ಪಟ್ಟೆಯನ್ನು ನೀಡಿದೆ. ಹೀಗಿದ್ದೂ ನಗರಸಭೆಯಿಂದ ಫಾರಂ ನಂ.3 ರನ್ನು ನೀಡಲು ವಿಳಂಬ ಧೋರಣೆ ತಳೆಯಲಾಗುತ್ತಿದೆ ಎಂದು ಆರೋಪಿಸಿದರು.
ಐಟಿಐ ಜಂಕ್ಷಣ್ ಬಳಿಯಲ್ಲಿ 1975 ರಲ್ಲೆ ಮಣಿ ಎಂಬವರು ಅಂಗಡಿಯನ್ನಿರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಆ ಸಂದರ್ಭವೆ ಅವರು ಅಂದಿನ ಪುರಸಭೆಗೆ ಜಾಗಕ್ಕೆ ಸಂಬಂಧಿಸಿದಂತೆ ಟಿಟಿ ದಂಡವನ್ನು ಪಾವತಿಸಿದ್ದರು. ಇವರಿಗೆ 2017 ರಲ್ಲಿ ಕಂದಾಯ ಇಲಾಖೆ ಪಟ್ಟೆಯನ್ನು ಒದಗಿಸಿದೆ. ಈ ಆಧಾರದಲ್ಲಿ ಫಾರಂ ನಂ. 3 ಮಾಡಿಕೊಳ್ಳುವ ಸಲುವಾಗಿ ಮೂಡಾದಿಂದ ಸಿಂಗಲ್ ಲೇ ಔಟ್ ಮಾಡಿ, ನಗರಸಭೆಗೆ ಕಡತಗಳು ಬಂದಿರುವುದಲ್ಲದೆ, 2019 ರಲ್ಲಿ ಫಾರಂ ನಂ. 3 ರ ಪ್ರೂಫ್ನ್ನು ನಗರಸಭೆ ನೀಡಿದೆ. ಆದರೆ, ಇಲ್ಲಿಯವರೆಗೆ ಜಾಗದ ದಾಖಲೆಯನ್ನು ಒದಗಿಸಿಲ್ಲವೆಂದು ದೂರಿದರು.
ಈ ನಡುವೆ ಮಣಿ ಅವರು ಮೃತಪಟ್ಟಿದ್ದು, ಅವರ ಪತ್ನಿ ಧನಲಕ್ಷ್ಮಿ ಅವರು ಫಾರಂ ನಂ. 3 ನ್ನು ಪಡೆಯಲು ಮುಂದಾದ ಸಂದರ್ಭ ಇದೇ 2023 ರ ಮೇ 4 ರಂದು ಅಂಗಡಿ ಮಳೆಗೆಯ ಜಾಗದ ಆಸ್ತಿ ತೆರಿಗೆ ಪಾವತಿಸುವಂತೆ ನಗರ¸ಭೆ ಸೂಚಿಸಿದೆ. ಅದರಂತೆ ಅವರು ಆಸ್ತಿ ತೆರಿಗೆಯನ್ನೂ ಪಾವತಿಸಿದ್ದಾರೆ. ಹೀಗಿದ್ದೂ ಅವರಿಗೆ ನಗರಸಭೆ ದಾಖಲೆಯನ್ನು ನೀಡದಿರುವುದಕ್ಕೆ ಕಾರಣವೇನು ಎಂದು ಕೆ.ಎಂ.ಗಣೇಶ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸಮಾಜ ಸೇವಕರಾದ ಇಸಾಕ್ ಖಾನ್, ರವಿ ಕಿರಣ್ ಹಾಗೂ ಮನು ಕುಮಾರ್ ಉಪಸ್ಥಿತರಿದ್ದರು.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*