ಮಡಿಕೇರಿ ಜು.12 : ಭಾಗಮಂಡಲದ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯದಲ್ಲಿ ಪ್ರತಿ ವರ್ಷ ರೂಢಿ ಸಂಪ್ರದಾಯದಂತೆ “ಪೊಲಿಂಕಾನ” ಉತ್ಸವನ್ನು ಆಚರಿಸಲಾಗುತ್ತಿದೆ. ಅದರಂತೆ ಈ ವರ್ಷವೂ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಆಷಾಡ ಕೃಷ್ಣ ಪಕ್ಷದ ಗ್ರೀಷ್ಮ ಋತು ದಕ್ಷಿಣಾಯನದ ಕರ್ಕಾಟಕ ಮಾಷ ಒಂದನೇ ಸೋಮವಾರ ಜುಲೈ, 17 ರಂದು ಮಧ್ಯಾಹ್ನ 12 ಗಂಟೆಗೆ ಮಹಾ ಪೂಜೆಯ ನಂತರ ‘ಪೊಲಿಂಕಾನ ಉತ್ಸವ’ ನಡೆಯಲಿದೆ.
ಭಕ್ತಾಧಿಗಳು ಪೊಲಿಂಕಾನ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾದ ಎಂ.ಎಸ್.ದೊರೆ ಕೋರಿದ್ದಾರೆ.







