ಮಡಿಕೇರಿ ಜು.14 : ಸುಂಟಿಕೊಪ್ಪದಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಯಶ್ವಸಿಯಾಗಿ ಭೇದಿಸಿದ್ದು ಮಾಲು ಹಾಗೂ ವಾಹನ ಸಹಿತ ಐವರನ್ನು ಬಂಧಿಸಿದ್ದಾರೆ.
ಸುಂಟಿಕೊಪ್ಪ ಚೆಸ್ಕಾಂ ಬಳಿಯ ನಿವಾಸಿಗಳಾದ ರಫೀಕ್ (40), ನಯನ್ (25), ಅಭಿಷೇಕ್ (20), ಮೊಹಮ್ಮದ್ ಮುಕ್ರಮ್ (40) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿಂದ 1 ಕೆ.ಜಿ.65 ಗ್ರಾಂ ಗಾಂಜಾ, 2.5 ಗ್ರಾಂ ನಿಷೇಧಿತ ಮಾದಕ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸುಂಟಿಕೊಪ್ಪದ ಮಾರುಕಟ್ಟೆ ರಸ್ತೆ ಬಳಿಯಲ್ಲಿ ವ್ಯಾಪಾರ ನಡೆಸುತ್ತಿರುವ ಸಂದರ್ಭ ಖಚಿತ ಮಾಹಿತಿ ಆಧಾರಿಸಿ ಪೊಲೀಸರು ದಾಳಿ ನಡೆಸಿದ್ದು, ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸುಂದರ್ ರಾಜ್, ಡಿವೈಎಸ್‍ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಜಿ.ಮಹೇಶ್ ನೇತೃತ್ವದಲ್ಲಿ ತಂಡದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ವಿಭಾಗದ ಎಸ್.ಐ.ಸ್ವಾಮಿ ಸಿಬ್ಬಂದಿಗಳಾದ ಮುಖ್ಯಪೇದೆ ಎಂ.ವಿ.ಸತೀಶ್, ಜಗದೀಶ್, ಪ್ರವೀಣ್, ಸಂಪತ್, ನಿಶಾಂತ್, ಸತೀಶ್ ಕುಮಾರ್, ಇಳಗೆರೆ, ಅಭಿಲಾಷ್, ಪ್ರಶಾಂತ್ ಕುಮಾರ್,ಉದಯಕುಮಾರ್, ಸೌಮ್ಯ, ಸಂತೋಷ್, ಸತೀಶ್ ಹಿರಿಗೇರಿ ಸೇರಿದಂತೆ ಮತ್ತಿತರರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.