ಮಡಿಕೇರಿ ಜು.16 : ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆಯ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 1 ಕೆ.ಜಿ.702 ಗ್ರಾಂ ಗಾಂಜಾ ಮತ್ತು 9 ಸಂಖ್ಯೆಯ ನಿಷೇಧಿತ ಐಎಸ್‌ಡಿ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.NEWSDESK
ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದ ಹೋಂ ಸ್ಟೇ ಒಂದರಲ್ಲಿ ಮಾದಕ ವಸ್ತು ಮಾರಾಟ ಮತ್ತು ಬಳಕೆ ಕುರಿತು ಪೊಲೀಸ್ ಠಾಣೆಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು 414 ಗ್ರಾಂ ಗಾಂಜಾ ಮತ್ತು 9 ಸಂಖ್ಯೆಯ ನಿಷೇಧಿತ ಐಎಸ್‌ಡಿ ಮಾದಕ ವಸ್ತು ಸಹಿತ ಹಲವರನ್ನು ವಶಕ್ಕೆ ಪಡೆದರು.NEWSDESK
ಮಂಗಳೂರು ಮೂಲದ ರಿತಿಕ್(23), ವಿಘ್ನೇಶ್ ಅಜೀತ್ ಅಂಚನ್(21), ಸುಮನ್ ಹರ್ಷಿತ್(26), ಚಿರಾಗ್ ಸಾನಿಲ್(24), ಮಂಜುನಾಥ್(30), ಲತೀಶ್ ನಾಯಕ್(32), ಸಚಿನ್(26), ರಾಹುಲ್(26), ಪ್ರಜ್ವಲ್(32), ಅವಿನಾಶ್(28), ಪ್ರತಿಕ್ ಕುಮಾರ್(27), ಧನುಷ್(28), ರಾಜೇಶ್(45), ದಿಲ್ ರಾಜು(30) ಹಾಗೂ ಮಡಿಕೇರಿ ನಿವಾಸಿ ಹೋಂ ಸ್ಟೇ ಮಧ್ಯವರ್ತಿ ಬಿ.ಗಣೇಶ್(47) ಹಾಗೂ ಹೋಂಸ್ಟೇ ಮಾಲೀಕ ಸದಾಶಿವ ಬಿ.ಹೆಚ್.(31) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.NEWSDESK
::: ಮಡಿಕೇರಿಯಲ್ಲಿ ಮಾರಾಟ :::
ಕನ್ನಂಡಬಾಣೆ ರಸ್ತೆ ಜಂಕ್ಷನ್‌ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಮೈಸೂರು ಉದಯಗಿರಿ ನಿವಾಸಿ ಆಲಿಂ ಅಹಮದ್(36), ಹಿಲ್ ರಸ್ತೆ ನಿವಾಸಿ ಎಂ.ಐ.ಮೊಹಿಸಿನ್(45) ಎಂಬವರನ್ನು ಬಂಧಿಸಲಾಗಿದೆ.NEWSDESK ಆರೋಪಿಗಳ ಬಳಿಯಿಂದ 728 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಮಹಿಳಾ ಸಮಾಜದ ಬಳಿ ನಿಷೇಧಿತ ಮಾದಕ ವಸ್ತು ಸೇವಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ನಿವಾಸಿಗಳಾದ ಎಂ.ಎ.ಸಾಗರ್(22) ಮತ್ತು ಎಂ.ಎಸ್.ರೆಹಮಾನ್(31) ಹಾಗೂ ಚೇತನ್.ಕೆ.(23) ಎಂಬವರುಗಳನ್ನು ಬಂಧಿಸಲಾಗಿದೆ.NEWSDESK
::: ಸಿದ್ದಾಪುರ :::
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚೆನ್ನಯ್ಯನಕೋಟೆ ನಿವಾಸಿ ಇಮ್ರಾನ್(31) ಎಂಬಾತನನ್ನ ಬಂಧಿಸಿ ಆತನ ಬಳಿಯಿಂದ 190 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.NEWSDESK
::: ಗೋಣಿಕೊಪ್ಪ :::
ಗೋಣಿಕೊಪ್ಪ ಕಾವೇರಿ ಕಾಲೇಜು ರಸ್ತೆ ಮೂಲಕ ಮಾರಾಟ ಮಾಡುವ ಸಲುವಾಗಿ ಗಾಂಜಾ ಸಾಗಿಸುತ್ತಿದ್ದ 3 ಮಂದಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ. ಅಲ್ಲಿನ ನಿವಾಸಿಗಳಾದ ಎಂ.ಎಂ. ಶಮೀರ್(37), ಎಂ.ಜಬ್ಬಾರ್(23) ಮತ್ತು ನಿಸಾರ್(37) ಎಂಬವರನ್ನು ಬಂಧಿಸಿ 370 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.NEWSDESK
ಕಾರ್ಯಾರಚಣೆ ನಡೆಸಿದ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.NEWSDESK
Breaking News
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*