ಮಡಿಕೇರಿ ಜು.18 : ವಿದ್ಯುತ್ ತಗುಲಿ 19 ಕುರಿಗಳು ಸಾವನ್ನಪಿರುವ ಘಟನೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ಶ್ರೀರಂಗಪುರದಲ್ಲಿ ನಡೆದಿದೆ.
ಸ್ಥಳೀಯ ರೈತ ಮಂಜುನಾಥ್ ಎಂಬುವವರಿಗೆ ಸೇರಿದ ಕುರಿಗಳನ್ನು ವಿದ್ಯುತ್ ಕಂಬದ ಸಮೀಪದಲ್ಲೇ ಇದ್ದ ಶೆಡ್ ನಲ್ಲಿ ಬಿಡಲಾಗಿತ್ತು. ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಶೆಡ್ ಗೆ ವಿದ್ಯುತ್ ಹರಿದು ಕುರಿಗಳು ಸಾವನ್ನಪ್ಪಿವೆ. ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದ್ದು, ಪರಿಹಾರ ನೀಡಬೇಕೆಂದು ಮಂಜುನಾಥ್ ಮನವಿ ಮಾಡಿದ್ದಾರೆ.








